ಸೀಮೋಲ್ಲಂಘನಗೈದು ವಿಜಯದಶಮಿ ಆಚರಣೆ

12 KAMPLI 05
ಕಂಪ್ಲಿಯ ಪೇಟೆ ಬಸವೇಶ್ವರ, ಕೂಲಿಕಟ್ಟೆ ಬಸವೇಶ್ವರ ದೇವರ ಸೀಮೋಲ್ಲಂಘನ ಮೆರವಣಿಗೆಯಲ್ಲಿ ಸದ್ಭಕ್ತರಾದ ಡಿ.ವೀರಪ್ಪ, ಎಲಿಗಾರ ವೆಂಕಟರೆಡ್ಡಿ, ಯು.ಎಂ.ವಿದ್ಯಾಶಂಕರ, ವಾಲಿಕೊಟ್ರಪ್ಪ, ಘನಮಠದಯ್ಯ ಹಿರೇಮಠ ಇತರರಿದ್ದರು.
Published on

ಕಂಪ್ಲಿ: ಪಟ್ಟಣದ ನಾನಾ ದೇವಸ್ಥಾನಗಳ ದೇವತೆಗಳು ಮೆರವಣಿಗೆ ಮೂಲಕ ಸಾಗಿ, ಬನ್ನೀವೃಕ್ಷಕ್ಕೆ ಪೂಜೆ ಸಲ್ಲಿಸಿ, ಬನ್ನಿ ಮುಡಿವ ಮೂಲಕ ಶನಿವಾರ ಸಂಜೆ ಸೀಮೋಲ್ಲಂಘನಗೈದು ವಿಜಯದಶಮಿ ಆಚರಿಸಲಾಯಿತು.

ಪೇಟೆ ಬಸವೇಶ್ವರ ಮತ್ತು ಕೂಲಿಕಟ್ಟೆ ಬಸವೇಶ್ವರ ದೇವರು ಜೆಸ್ಕಾಂ ಬನ್ನಿಕಾಳಮ್ಮ ಗುಡಿಗೆ ತೆರಳಿ ಪೂಜೆ ಸಲ್ಲಿಸಿ ಸೀಮೋಲ್ಲಂಘನಗೈದರೆ, ಅಮೃತ ಶಿಲಾರಾಮಚಂದ್ರ, ನಗರೇಶ್ವರ, ಕನ್ಯಕಾಪರಮೇಶ್ವರಿ, ಹೊಳೆ ಆಂಜನೇಯ, ಗುಡ್ಡದ ತಿಮ್ಮಪ್ಪ, ಪಟ್ಟಾಭಿರಾಮಚಂದ್ರ, ಲಕ್ಷ್ಮೀ ವೆಂಕಟರಮಣ, ಉದ್ಭವ ಮಹಾಗಣಪತಿ, ಕೂಲಿಕಟ್ಟೆ ಬಸವೇಶ್ವರ, ನಿಮಿಷಾಂಬಾದೇವಿ, ಗದ್ದೆ ಚೌಡಮ್ಮ ಸೇರಿ ನಾನಾ ದೇವತೆಗಳು ದೇವಸ್ಥಾನದಲ್ಲಿ ಬನ್ನಿ ಮುಡಿದು ಸೀಮೋಲ್ಲಂಘನಗೈದವು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net