ಶ್ವಾನಕ್ಕೂ ಒಲಿದು ಬಂತು ಸೀಮಂತ ಭಾಗ್ಯ!

dog
Published on

ಗುರುಪುರ: ಗರ್ಭಿಣಿಯರಿಗೆ ಸೀಮಂತ ಮಾಡುವಂತೆ ಮನೆಯ ಸಾಕು ನಾಯಿಗೂ ಸೀಮಂತ ಮಾಡಿರುವ ಅಪೂರ್ವ ವಿದ್ಯಮಾನ ಗುರುಪುರದ ಅಣೆ ಬಳಿಯ ಅಗಸರ ಗುಡ್ಡೆ ಎಂಬಲ್ಲಿ ನಡೆದಿದೆ.

ಇಲ್ಲಿನ ಭಾಸ್ಕರ ಮಡಿವಾಳ-ಮಂಜುಳಾ ದಂಪತಿ ನಾಲ್ಕು ದಿನಗಳ ಹಿಂದೆ ತಮ್ಮ ಸಾಕುನಾಯಿಗೆ ಸೀಮಂತ ನಡೆಸಿರುವುದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಶ್ವಾನವನ್ನು ಕುರ್ಚಿಯಲ್ಲಿ ಕೂರಿಸಿ ವಿವಿಧ ಬಗೆಯ ಹಣ್ಣುಗಳು, ಸಿಹಿತಿಂಡಿ, ಐಸ್‌ಕ್ರೀಂ ಬಡಿಸಿರುವುದು ವೈರಲ್ ಆಗಿರುವ ಚಿತ್ರದಲ್ಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net