

ವಿಜಯಪುರ: ಇಲ್ಲಿನ ಬಿಎಲ್ಡಿಇ ಡೀಮ್ಡ್ ವಿಶ್ವವಿದ್ಯಾಲಯ ಬಿ.ಎಂ. ಪಾಟೀಲ ವೈದ್ಯಕಿಯ ಕಾಲೇಜು, ಆಸ್ಪತ್ರೆ ವತಿಯಿಂದ ನಗರದ ವಿವೇಕನಗರದ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಶಾಲಾ ವಿದ್ಯಾರ್ಥಿಗಳಿಗೆ ಇತ್ತೀಚೆಗೆ ಥೈರಾಯ್ಡ್ ಜಾಗೃತಿ ಶಿಬಿರ ನಡೆಯಿತು.
ಥೈರಾಯ್ಡ್ನಿಂದ ಆರೋಗ್ಯದ ಮೇಲೆ ಆಗುವ ಪರಿಣಾಮ ಮತ್ತು ಲಣಗಳ ಕುರಿತು ಮಾಹಿತಿ ನೀಡಲಾಯಿತು. ಥೈರಾಯ್ಡ್ ಲಣಗಳು ಕಂಡುಬಂದಲ್ಲಿ ತಣ ವೈದ್ಯರನ್ನು ಸಂಪರ್ಕಿಸಿ, ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಶಿಬಿರದಲ್ಲಿ ಭಾಗವಹಿಸಿದ್ದ 133 ವಿದ್ಯಾರ್ಥಿಗಳು ಮತ್ತು ಸಿಬ್ಬಂದಿಗೆ ಉಚಿತ ಪ್ರಾಥಮಿಕ ಥೈರಾಯ್ಡ್ ತಪಾಸಣೆ ನಡೆಯಿತು. ಥೈರಾಯ್ಡ್ ಆರೋಗ್ಯವನ್ನು ಬೆಂಬಲಿಸುವ ಜೀವನಶೈಲಿ ಅಭ್ಯಾಸಗಳು ಮತ್ತು ಆಹಾರ ಪದ್ಧತಿಗಳ ಬಗ್ಗೆ ಪೋಷಕರಿಗೆ ಮತ್ತು ಶಿಕರಿಗೆ ಮಾಹಿತಿ ನೀಡಲಾಯಿತು.
ಹೇಮರೆಡ್ಡಿ ಮಲ್ಲಮ್ಮ ಟ್ರಸ್ಟ್ ಅಧ್ಯ ಸುರೇಶ ದೇಸಾಯಿ ಶಿಬಿರ ಉದ್ಘಾಟಿಸಿದರು. ವೈದ್ಯಕಿಯ ವಿಭಾಗ ಡೀನ್ ಡಾ. ತೇಜಸ್ವಿನಿ ವಲ್ಲಭ, ಡಾ. ಶ್ರುತಿ ಸಾಲಿಯನ್, ಡಾ. ಶಿವರಾಜ ಮಂಗ್ಯಾಲ್, ಡಾ. ಸ್ನೇಹಲ್ ಪಾಟೀಲ, ಕಂಠೀರವ ಕುಲ್ಲೋಳಿ ಉಪಸ್ಥಿತರಿದ್ದರು. ಆಸ್ಪತ್ರೆ ಜನರಲ್ ಸರ್ಜರಿ ವಿಭಾಗ ಪ್ರಾಧ್ಯಾಪಕ ಡಾ. ಗಿರೀಶ ಕುಲ್ಲೋಳಿ ನಿರ್ವಹಿಸಿದರು.