ಉರಿನಾಗಬ್ರಹ್ಮಸ್ಥಾನದಲ್ಲಿ ಪಂಚದೈವಗಳ ದರ್ಶನ

darshana
ಸಾಂತೂರು-ಪಿಲಾರು ಶ್ರೀ ಆಲ್ ಉರಿನಾಗಬ್ರಹ್ಮಸ್ಥಾನದಲ್ಲಿ ನಡೆಯುವ ಗಡುಪಾಡಿನ ನೇಮೋತ್ಸವ ಅಂಗವಾಗಿ ಪಂಚ ದೈವಗಳ ದರ್ಶನ ಸೇವೆ ಸಂಪನ್ನಗೊಂಡಿತು.
Published on

ಪಡುಬಿದ್ರಿ: ಸಾಂತೂರು-ಪಿಲಾರು ಶ್ರೀ ಆಲ್ ಉರಿ ನಾಗಬ್ರಹ್ಮಸ್ಥಾನದಲ್ಲಿ ಪಿಲಾರು-ಸಾಂತೂರು ಗ್ರಾಮಸ್ಥರ ಕೂಡುವಿಕೆಯೊಂದಿಗೆ ಪೂರ್ವ ಸಂಪ್ರದಾಯದಂತೆ 12 ವರ್ಷಗಳಿಗೊಮ್ಮೆ ನಡೆಯುವ ಗಡುಪಾಡಿನ ನೇಮೋತ್ಸವ ಅಂಗವಾಗಿ ಶುಕ್ರವಾರ ರಾತ್ರಿ ಸಾಂತೂರು ಪರಾರಿ ಧೂಮಾವತಿ ಮತ್ತು ಬಂಟ ದೈವಗಳ ನೇಮೋತ್ಸವ ನಡೆಯಿತು.

ನೇಮೋತ್ಸವದ ಗಗ್ಗರದೆಚ್ಚಿಯ ಬಳಿಕ ನಡೆದ ಮಾಣೆಚ್ಚಿಯಲ್ಲಿ ಪಿಲಾರು ಪರಾರಿ ಶ್ರೀ ಕೊಡಮಣಿತ್ತಾಯ, ಪಿಲಾರು ತಂಬಿದಬೆಟ್ಟು ಶ್ರೀ ಧರ್ಮಜಾರಂದಾಯ-ಬಂಟ ಹಾಗೂ ಸಾಂತೂರು ಪರಾರಿ ಶ್ರೀ ಧೂಮಾವತಿ ಮತ್ತು ಬಂಟ ದೈವಗಳ ದರ್ಶನ ಸೇವೆ ನಡೆಯಿತು.

ಪಿಲಾರು ಪರಾರಿ, ಸಾಂತೂರು ಪರಾರಿ, ಪಿಲಾರು ಮಜಲಬೆಟ್ಟುಬೀಡು, ಪಿಲಾರು ತಂಬಿದಬೆಟ್ಟು, ಪಿಲಾರು ಕಂಕಣಗುತ್ತು, ಸಾಂತೂರು ಕುಂದಬೆಟ್ಟುಗುತ್ತು, ಸಾಂತೂರು ಸಾಮಾನಾಡಿಗುತ್ತು ಮನೆತನದ ಪ್ರಮುಖರು, ಗುತ್ತು, ಬರ್ಕೆ, ದೈವಸ್ಥಾನಗಳ ಮುಖ್ಯಸ್ಥರು, ಗುರಿಕಾರರು, ಪ್ರಮುಖರು, ಸಾಂತೂರು-ಪಿಲಾರು ಗ್ರಾಮಸ್ಥರು, ಆಲ್ ಉರಿನಾಗಬ್ರಹ್ಮಸ್ಥಾನ ಆಡಳಿತ ಸಮಿತಿ ಮತ್ತು ಜೀರ್ಣೋದ್ಧಾರ ಸಮಿತಿಯ ಪ್ರಮುಖರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net