

ಧಾರವಾಡ: ಧಾರವಾಡ ಭಾಗದಲ್ಲಿ ಶನಿವಾರ ಸೀಗೆ ಹುಣ್ಣಿಮೆಯನ್ನು ಸಂಭ್ರಮದಿAದ ಆಚರಿಸಲಾಯಿತು. ಜಮೀನುಗಳಲ್ಲಿ ಪೂಜೆ ಸಲ್ಲಿಸಿ ಉತ್ತಮ ಮಳೆ- ಬೆಳೆಗಾಗಿ ಪ್ರಾರ್ಥಿಸಿದರು.
ಸೀಗೆ ಹುಣ್ಣಿಮೆ ಎಂದರೆ ಹೋಳಿಗೆ ಸೇರಿ ಸಿಹಿತಿನಿಸುಗಳ ಊಟ ಸಾಮಾನ್ಯ. ರೈತ ಕುಟುಂಬದವರು ತರಹೇವಾರಿ ಊಟ ಕಟ್ಟಿಕೊಂಡು ಹೊಲಗಳಿಗೆ ತೆರಳಿ ಪರಿವಾರಸಮೇತ ಊಟ ಸವಿದರು.
ಈ ಬಾರಿ ಮಳೆಯ ಕೊರತೆಯಿಂದ ಮುಂಗಾರು ಬೆಳೆಗಳಿಲ್ಲ. ಆದರೂ ಹಿಂಗಾರು ಬೆಳೆಯಾದರೂ ಕೈ ಸೇರಲಿ ಎಂದು ಪ್ರಾರ್ಥಿಸಿ ಭೂತಾಯಿಗೆ ಚರಗದ ನೈವೇದ್ಯ ಅರ್ಪಿಸಿದರು.