‘ಸೀಗೆ’ ಕಾಡಾನೆ ಸೆರೆ ಕಾರ್ಯಾಚರಣೆ ವಿಫಲ

1713618014371
ಕಾಡಾನೆ ಸೆರೆ ಕಾರ್ಯಾಚರಣೆಗೆ ಆಗಮಿಸಿದ್ದ ಸಾಕಾನೆಗಳಿಗೆ ಪೂಜೆ ಸಲ್ಲಿಸಿದ ನಂತರ ಕಾರ್ಯಾಚರಣೆಗೆ ಇಳಿಸಲಾಯಿತು.
Published on

ಸಕಲೇಶಪುರ : ತಾಲೂಕಿನ ಹಾಡ್ಯ ಗ್ರಾಮ ಸಮೀಪ ಶನಿವಾರ ನಡೆದ ಸೀಗೆ ಹೆಸರಿನ ಕಾಡಾನೆ ಸೆರೆ ಕಾರ್ಯಾಚರಣೆ ವಿಫಲವಾಗಿದೆ.
ಬೇಲೂರು-ಸಕಲೇಶಪುರ ತಾಲೂಕಿನ ಎಲ್ಲೆಡೆ ಸಂಚರಿಸುತ್ತ ವಿಪರೀತ ಹಾನಿಗೆ ಕಾರಣವಾಗಿದ್ದ ಸೀಗೆ ಆನೆಯನ್ನು ಸೆರೆಹಿಡಿಯಲು ಸರ್ಕಾರ ಅನುಮತಿ ನೀಡಿತ್ತು. ಇತ್ತೀಚೆಗೆ ಕರಡಿ ಆನೆ ಸೆರೆ ಕಾರ್ಯಾಚರಣೆ ನಡೆಸಿ ದುಬಾರೆ ಅರಣ್ಯಕ್ಕೆ ಕರಡಿ ಕಾಡಾನೆ ಬೀಡಲು ತೆರಳಿದ್ದ ಅಭಿಮನ್ಯು, ಪ್ರಶಾಂತ, ಸುಗ್ರೀವ ಎಂಬ ಕಾಡಾನೆಗಳು ಶನಿವಾರ ಮಧ್ಯಾಹ್ನ 3 ಗಂಟೆಗೆ ಹಾಡ್ಯ ಗ್ರಾಮಕ್ಕೆ ಬಂದಿಳಿದಿದ್ದವು. ಈ ಮೂರು ಸಾಕಾನೆಗಳು ಗ್ರಾಮಕ್ಕೆ ಬಂದ ನಂತರ ಸಾಕಾನೆಗಳಿಗೆ ಪೂಜೆ ಸಲ್ಲಿಸಿದ ಸಿಬ್ಬಂದಿ ಗ್ರಾಮ ಸಮೀಪದ ಹೆಬ್ಬೊಲ್ಡಿ ಅರಣ್ಯದಲ್ಲಿ ಬೀಡುಬಿಟ್ಟಿದ್ದ ಸೀಗೆ ಕಾಡಾನೆ ಸೆರೆ ಕಾರ್ಯಾಚರಣೆಯನ್ನು 3.30ಕ್ಕೆ ಆರಂಭಿಸಿದ್ದರು. ಆದರೆ, ದಟ್ಟಕಾಡಿನೊಳಗೆ ಬೀಡುಬಿಟ್ಟಿದ್ದ ಕಾಡಾನೆಗೆ ಅರಿವಳಿಕೆ ಮದ್ದು ನೀಡಿದರೆ ಸೆರೆಹಿಡಿದು ಹೊರತರುವುದು ಕಷ್ಟ ಎಂಬ ಅರಣ್ಯಾಧಿಕಾರಿಗಳ ನಿರ್ಧಾರದಿಂದ ಕೆಲಕಾಲ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು. ಈ ವೇಳೆಗೆ ದಟ್ಟಾರಣ್ಯದ ಮಧ್ಯೆ ಕಾಡಾನೆ ಸಮೀಪದ ಐಗೂರು ಗ್ರಾಮದ ಕಾಫಿ ತೋಟದೊಳಗೆ ಹೋಗಿ ಕಣ್ಮರೆಯಾಗಿದೆ. ಇದರಿಂದಾಗಿ ಕಾಡಾನೆ ಸೆರೆ ಕಾರ್ಯಾಚರಣೆ ಮೊಟಕುಗೊಳಿಸಲಾಗಿದೆ.

ಉಪ ಅರಣ್ಯ ಸಂರಕ್ಷಣಾಧಿಕಾರಿ ಸ್ವರೂಪ್, ವಲಯ ಅರಣ್ಯಾಧಿಕಾರಿ ಶಿಲ್ಪಾ ಸೇರಿದಂತೆ ಹಲವು ಅಧಿಕಾರಿಗಳು ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net