

ಹುಬ್ಬಳ್ಳಿ: ಮುಂಗಾರು ಬಿತ್ತನೆಗೆ ಸಜ್ಜಾಗಿರುವ ರೈತರಿಗೆ ವಿತರಣೆಯಾಗುವ ಬಿತ್ತನೆ ಬೀಜಗಳನ್ನು ಕೃಷಿಕ ಸಮಾಜದ ವತಿಯಿಂದ ರೈತ ಸಂಪರ್ಕ ಕೇಂದ್ರಗಳಲ್ಲಿ ಪರಿಶೀಲನೆ ಮಾಡಲಾಯಿತು.
ಇಲ್ಲಿಯ ಅಮರಗೋಳ ಎಪಿಎಂಸಿ ಆವರಣದಲ್ಲಿರುವ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿದ ಕೃಷಿಕ ಸಮಾಜದ ಅಧ್ಯಕ್ಷ ಕರಬಸಪ್ಪ ಬೆಟಗೇರಿ, ಮನೋಹರ ಹಿರೇಮಠ, ನಾಗಪ್ಪ ಯಡಚಿಟ್ಟಿ, ಶಿವಪ್ಪ ಹೊರಕೇರಿ ಇತರರು ಪ್ಯಾಕೆಟ್ ಗಳಿಂದ ಬೀಜ ಪಡೆದು ಅವುಗಳ ಮೊಳಕೆ ಪ್ರಮಾಣ ಇತ್ಯಾದಿಗಳನ್ನು ಪರೀಕ್ಷಿಸಿದರು.
ಸೋಯಾಬೀನ್, ಉದ್ದು, ಹೆಸರು ಹಾಗೂ ಮೆಕ್ಕೆಜೋಳದ ಬೀಜಗಳ ಮೊಳಕೆ ಪ್ರಮಾಣ ಪರಿಶೀಲಿಸಲಾಯಿತು. ಕೃಷಿ ಇಲಾಖೆ ಸಿಬ್ಬಂದಿಯು ವಿವಿಧ ಬಿತ್ತನೆ ಬೀಜಗಳನ್ನು ಒದಗಿಸಿ ಪರೀಕ್ಷೆಗೆ ನೆರವಾದರು.
ರೈತ ಸಂಪರ್ಕ ಕೇಂದ್ರದಲ್ಲಿ ಬೀಜ ವಿತರಣೆ ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಿದರು. ನಂತರ ಲಕ್ಷ್ಮೀ ಪೂಜೆ ನೆರವೇರಿಸುವ ಮೂಲಕ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.