ಮೇ 26ರಂದು ಕೆವಿಕೆಯಲ್ಲಿ ಬಿತ್ತನೆ ಬೀಜ ಮೇಳ

greengram.jpg
Published on


ಬೆಳಗಾವಿ: ಬೈಲಹೊಂಗಲ ತಾಲೂಕಿನ ಮತ್ತಿಕೊಪ್ಪದ ಕೃಷಿನ ವಿಜ್ಞಾನ ಕೇಂದ್ರದ ಆವರಣದಲ್ಲಿ ಮೇ 26ರಂದು ಬೆಳಗ್ಗೆ 10 ರಿಂದ ಸಂಜೆ 6 ಗಂಟೆಯವರೆಗೆ ಬಿತ್ತನೆ ಬೀಜ ಮೇಳ ಜರುಗಲಿದೆ.
ಮುಂಗಾರು ಹಂಗಾಮಿನಲ್ಲಿ ಗುಣಮಟ್ಟದ ಹಾಗೂ ಅಧಿಕ ಇಳುವರಿ ನೀಡುವ ತಳಿಗಳ ಬೀಜವನ್ನು ರೈತರಿಗೆ ಸಕಾಲದಲ್ಲಿ ಪೂರೈಸುವ ಉದ್ದೇಶದಿಂದ ಕೆವಿಕೆ ಮತ್ತಿಕೊಪ್ಪದ ಆವರಣದಲ್ಲಿ ಬೀಜ ಮೇಳವನ್ನು ಆಯೋಜಿಸಲಾಗಿದೆ. ಬೀಜ ಮೇಳದಲ್ಲಿ ಉತ್ತಮ ಗುಣಮಟ್ಟದ ಹೆಸರು, ಉದ್ದು, ಸೋಯಾ ಅವರೆ, ಶೇಂಗಾ ಹಾಗೂ ಈರುಳ್ಳಿ ಬೀಜ, ಜೈವಿಕ ಗೊಬ್ಬರ, ಜೈವಿಕ ಕೀಟನಾಶಕ, ಜೈವಿಕ ಶಿಲೀಂಧ್ರನಾಶಕ, ತೋಟಗಾರಿಕೆ ಸಸಿಗಳು ಹಾಗೂ ಎರೆಹುಳು ಗೊಬ್ಬರ ದೊರೆಯುತ್ತವೆ.ಅಧಿಕ ಸಂಖ್ಯೆಯಲ್ಲಿ ರೈತ ಬಾಂಧವರು ಭಾಗವಹಿಸಿ ಬೀಜ ಮೇಳದ ಪ್ರಯೋಜನ ಪಡೆಯಬೇಕೆಂದು ಕೃಷಿ ವಿಜ್ಞಾನ ಕೇಂದ್ರದ  ಮುಖ್ಯಸ್ಥೆ ಶ್ರೀದೇವಿ ಅಂಗಡಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

---------- Forwarded message ---------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net