ಮುಳಗುಂದದಲ್ಲಿ ಬಿತ್ತನೆ ಬೀಜ ವಿತರಣೆ

SEEDS
Published on

ಮುಳಗುಂದ: ಪಟ್ಟಣದ ಕೃಷಿ ಇಲಾಖೆಯ ಬೀಜ ವಿತರಣೆ ಕೇಂದ್ರದಲ್ಲಿ ರೈತರಿಗೆ ಶುಕ್ರವಾರ ರಿಯಾಯತಿ ದರದಲ್ಲಿ ಹಿಂಗಾರು ಬಿತ್ತನೆ ಬೀಜ ವಿತರಿಸಲಾಯಿತು.

ಕೃಷಿ ಸಹಾಯಕ ಅಧಿಕಾರಿ ಎಫ್.ಸಿ. ಗುರಿಕಾರ ಮಾತನಾಡಿ, ‘ಮುಳಗುಂದ ಸೇರಿದಂತೆ ಕಣವಿ, ಹೊಸೂರು, ಹರ್ತಿ, ಚಿಂಚಲಿ, ನೀಲಗುಂದ, ಕಲ್ಲೂರು,ಬಸಾಪೂರ, ಸೀತಾಲಹರಿ ಗ್ರಾಮಗಳಲ್ಲಿ ಒಟ್ಟು 5500 ಹೆಕ್ಟೇರ್‌ನಲ್ಲಿ ಕಡಲೆ, ಜೋಳ, ಕುಸುಬಿ ಬಿತ್ತನೆ ಗುರಿ ಹೊಂದಲಾಗಿದೆ’ ಎಂದರು.
300 ಕ್ವಿಂಟಾಲ್ ಕಡಲೆ, 10.20 ಕ್ವಿಂಟಾಲ್ ಜೋಳ, 5 ಕ್ವಿಂಟಾಲ್ ಕುಸುಬಿ, 1 ಕ್ವಿಂಟಾಲ್ ಬೀಜೋಪಚಾರ ಟ್ರೈಕೋಡರ್ಮಾ ಲಭ್ಯವಿದ್ದು, ರೈತರು ಇದರ ಸದುಪಯೋಗ ಪಡೆಯಬೇಕು ಎಂದರು.

ಬಿ.ವಿ. ಸುಂಕಾಪೂರ, ಬಸವರಾಜ ಕುರ್ತಕೋಟಿ, ನಿಂಗಪ್ಪ ಚಲವಾದಿ, ಕಾಶೀನಾಥ ಹಿರೇಮಠ, ಗೂಡುಸಾಬ ಗಾಡಿ, ಚಂಬಣ್ಣ ಬೂದಿಹಾಳ, ಮಹಾಲಿಂಗಪ್ಪ ಸುಂಕದ, ಶಂಕ್ರಯ್ಯ ಹಿರೇಮಠ, ಮುಂಜುನಾಥ ಜಿಡ್ಡಿ, ಖಾಸೀಮ ಹಾದಿಮನಿ, ಮಂಜುನಾಥ ಕರಿಗಾರ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net