ಸಸಿಗಳನ್ನು ಶಿಶುಗಳಂತೆ ಪೋಷಿಸಬೇಕು

2
Published on

ಹಂದಿಗುಂದ: ಪ್ರತಿಯೊಬ್ಬರೂ ತಮ್ಮ ತೋಟದಲ್ಲಿ ಸಸಿಗಳನ್ನು ನೆಟ್ಟು ಶಿಶುಗಳಂತೆ ಪೋಷಿಸಬೇಕು ಎಂದು ವಸಂತರಾವ ಪಾಟೀಲ ಪ್ರಥಮ ದರ್ಜೆ ಮಹಾವಿದ್ಯಾಲಯದ ಪ್ರಾಚಾರ್ಯ ಟಿ.ಎಸ್. ಒಂಟಗೂಡಿ ಹೇಳಿದರು.

ಸಮೀಪದ ಹಿಡಕಲ್ ಗ್ರಾಮದ ಶ್ರೀ ಸತ್ಯ ಪ್ರಭು ಶಿಕ್ಷಣ ಸಂಸ್ಥೆಯ ಶ್ರೀ ಲಕ್ಕಮ್ಮದೇವಿ ಕನ್ನಡ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ಹಾರೂಗೇರಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಭೂಗೋಳ ಶಾಸ್ತ್ರದ ಪ್ರಾಧ್ಯಾಪಕ ಗೌಡಪ್ಪ ಅಳ್ಳಿಮಟ್ಟಿ ಮಾತನಾಡಿದರು.

ಸಂಸ್ಥೆಯ ಚೇರ್ಮನ್ ಎಂ.ಪಿ.ಕಂಟಿಕಾರ, ಎಸ್.ಎನ್.ಬಿದರಿ, ಎಂ.ಎ.ಪಾಟೀಲ, ಎ.ಎಸ್.ಮಾಂಗ, ಮುಖ್ಯ ಶಿಕ್ಷಕ ಭಗವಂತ ಕಂಟಿಕಾರ, ಅಪ್ಪು ನಾವಿ, ಅಕ್ಷತಾ ಚಾಮಲ್ಲಿ, ರೂಪಾ ಸಾಮನೆ, ಅನಮ್ ಇನಾಮದಾರ, ಸುಜಾತ ಮಾಂಗ, ಶಿಕ್ಷಕ ಗೋವಿಂದ ತಳವಾರ, ಅಕ್ಷಯ ಪಾರ್ಥನಳ್ಳಿ, ಸಿದ್ಧರಾಮೇಶ್ವರ ಕಂಟಿಕಾರ ಇತರರಿದ್ದರು. ಭುವನೇಶ್ವರಿ ಕಂಟಿಕಾರ ಸ್ವಾಗತಿಸಿ ನಿರೂಪಿಸಿದರು. ಸುಧಾ ಪತ್ತಾರ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net