ವಿಜಯವಾಣಿ ಸುದ್ದಿಜಾಲ ಚಿಂತಾಮಣಿ
ಜಿಲ್ಲೆಯಲ್ಲಿ ರಾಗಿ ಮುಖ್ಯವಾದ ಮಳೆಯಾಶ್ರಿತ ಬೆಳೆಯಾಗಿದ್ದು, ಇತ್ತೀಚಿನ ದಿನಗಳಲ್ಲಿ ಬೆಂಕಿ ರೋಗದ ಸಮಸ್ಯೆ ಹೆಚ್ಚಾಗುತ್ತಿರುವುದರಿಂದ, ರೈತರಲ್ಲಿ ಇದರ ಬಗ್ಗೆ ಅರಿವು ಮೂಡಿಸಲು ಚಿಂತಾಮಣಿ ಕೃಷಿ ವಿಸ್ತರಣಾ ಶಿಕ್ಷಣ ಘಟಕ ಮತ್ತು ಕೃಷಿ ವಿಜ್ಞಾನ ಕೇಂದ್ರದಿಂದ ಕೋಲಾರ ತಾಲೂಕಿನ ಮುಳಬಾಗಿಲು ಮೇಲೇರಿ ಗ್ರಾಮದಲ್ಲಿ ರಾಗಿ ಬೆಳೆಯಲ್ಲಿ ಬೀಜೋಪಚಾರದ ಮಹತ್ವದ ಬಗ್ಗೆ ಹೊರಾಂಗಣ ತರಬೇತಿಯನ್ನು ಮತ್ತು ಪದ್ಧತಿ ಪ್ರಾತ್ಯಕ್ಷಿಕೆಯನ್ನು ಹಮ್ಮಿಕೊಳ್ಳಲಾಗಿತ್ತು.
ತೋಟಗಾರಿಕೆ ವಿಜ್ಞಾನಿ ಸಿಂಧು.ಕೆ. ಅವರು ಬೆಂಕಿರೋಗ ನಿರೋಧಕ ಕೆ.ಎಮ್.ಆರ್-316 ರಾಗಿ ತಳಿಯ ಬಗ್ಗೆ ಮಾಹಿತಿ ನೀಡಿ, ರಾಗಿ ಬೀಜವನ್ನು ಅಜೋಸ್ಪಿರಿಲಮ್ ಸೂಕ್ಷ್ಮಾಣು ಜೀವಿಗಳಿಂದ ಬೀಜೋಪಚಾರ ಮಾಡುವುದರಿಂದ ಗಾಳಿಯಲ್ಲಿರುವ ಸಾರಜನಕವನ್ನು ಸ್ವೀಕರಿಸಿ ಗಿಡದ ಬೆಳೆವಣಿಗೆಗೆ ಸಹಕರಿಸುತ್ತದೆ ಎಂದು ತಿಳಿಸಿದರು. 25ಕ್ಕೂ ಹೆಚ್ಚು ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.