ಬಿತ್ತನೆಗೂ ಮುನ್ನ ಬೀಜೋಪಚಾರ ಅಗತ್ಯ

Kampli Swoing
ದೇವಸಮುದ್ರ ಗ್ರಾಮದಲ್ಲಿ ಭತ್ತದ ಸಸಿಗಳನ್ನು ಸಿರಗುಪ್ಪದ ಕೃಷಿ ಸಂಶೋಧನಾ ಕೇಂದ್ರದ ಮುಖ್ಯ ಬೇಸಾಯ ತಜ್ಞ ಡಾ.ಸಿ.ಎಂ.ಕಾಲಿಬಾವಿ ಪರಿಶೀಲಿಸಿದರು. ಪ್ರಮುಖರಾದ ಕೆ.ಸೋಮಶೇಖರ್, ಜಿ.ಅಮರೇಗೌಡ, ಮರೇಗೌಡ, ಚಂದ್ರಪ್ಪ, ವೀರನಗೌಡ ಇದ್ದರು.
Published on

ಕಂಪ್ಲಿ: ತಾಲೂಕಿನ ದೇವಸಮುದ್ರ, ಚಿಕ್ಕಜಾಯಿಗನೂರು ಸೇರಿ ವಿವಿಧೆಡೆ ಭತ್ತದ ಸಸಿ ಮಡಿಗಳಲ್ಲಿ ಕಣೆನೊಣಗಳ ಬಾಧೆಯಿಂದ ಕೊಳವೆ, ಆನೆಕೊಂಬು ಕಾಣಿಸಿಕೊಂಡ ಹಿನ್ನ್ನೆಲೆಯಲ್ಲಿ ಗುರುವಾರ ಕೃಷಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.

ಸಿರಗುಪ್ಪ ಕೃಷಿ ಸಂಶೋಧನಾ ಕೇಂದ್ರದ ಮುಖ್ಯ ಬೇಸಾಯ ತಜ್ಞ ಡಾ.ಸಿ.ಎಂ.ಕಾಲಿಬಾವಿ ಮಾತನಾಡಿ, ಭತ್ತದ ಸಸಿ ಮಡಿಗಳನ್ನು ಬೆಳೆಸುವ ಮುನ್ನ ಸಾವಯವ ಗೊಬ್ಬರ, ಕೊಟ್ಟಿಗೆ ಗೊಬ್ಬರ, ಎರೆಹುಳು, ಕೋಳಿ ಗೊಬ್ಬರ ನೀಡಿಲ್ಲ. ಕೇವಲ ರಾಸಾಯನಿಕ ಗೊಬ್ಬರ ಸಿಂಪಡಿಸಿದ್ದಾರೆ.

ಸಸಿ ಮಡಿಗೆ ಬೀಜ ಬಿತ್ತನೆಗೂ ಮುನ್ನ ಬೀಜೋಪಚಾರ ನಡೆಸಿಲ್ಲ. ಬೀಜಗಳನ್ನು ಟ್ರೈಕೋಡರ್ಮಾ, ಸಿಡೋಮೊನಾಸ್‌ನಿಂದ ಉಪಚರಿಸಿಲ್ಲ. ಇದರಿಂದಾಗಿ ಕಣೆನೊಣ ಬಾಧೆ ಕಂಡು ಬರುವ ಸಾಧ್ಯತೆ ಇದೆ. ಭತ್ತದ ಹುಲ್ಲನ್ನು ಸುಡಬಾರದು.

ಕೇವಲ ರಾಸಾಯನಿಕ ಗೊಬ್ಬರ, ಕೀಟನಾಶಕ, ಗುಳಿಗೆಗಳ ಮೇಲೆ ರೈತರು ಅವಲಂಬಿತರಾಗದೆ ಸಾವಯವ ಗೊಬ್ಬರ ಬಳಸುವಲ್ಲಿ ಜಾಗೃತರಾಗಬೇಕು ಎಂದು ತಿಳಿಸಿದರು.

ಕೃಷಿ ಅಧಿಕಾರಿ ಕೆ.ಸೋಮಶೇಖರ್, ರೈತರಾದ ಜಿ.ಅಮರೇಗೌಡ, ಮರೇಗೌಡ, ಚಂದ್ರಪ್ಪ, ವೀರನಗೌಡ, ಶರಣಬಸವನಗೌಡ, ದೇವಸಮುದ್ರ ಸಣ್ಣ ರಾಮುಡು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net