ಹಸಿರು ಕ್ರಾಂತಿಯ ಜಾಗೃತಿಗಾಗಿ ಅಗಡಿ ಇಂಜಿನಿಯರಿಂಗ್ ಕಾಲೇಜ್‌ನಲ್ಲಿ ಬೀಜದುಂಡೆ ತಯಾರಿಕೆ

20 lxr 2 SEEDBOLLLLLLL
Published on

ಲಕ್ಷ್ಮೇಶ್ವರ: ಪಟ್ಟಣದ ಶ್ರೀಮತಿ ಕಮಲಾ ಮತ್ತು ಶ್ರೀ ವೆಂಕಪ್ಪ ಎಂ. ಅಗಡಿ ಇಂಜಿನಿಯರಿಂಗ್ ಮಹಾವಿದ್ಯಾಲಯದ ಎನ್‌ಎಸ್‌ಎಸ್ ಘಟಕದಿಂದ ಪ್ರಕೃತಿಗಾಗಿ ಒಂದು ದಿನ ಸೀಡ್ ಬಾಲ್ ತಯಾರಿಕೆ ಕಾರ್ಯಕ್ರಮ ಭಾನುವಾರ ಮಹಾವಿದ್ಯಾಲಯದ ಆವರಣದಲ್ಲಿ ನಡೆಯಿತು.


ವಿದ್ಯಾರ್ಥಿಗಳಲ್ಲಿ ಪ್ರಾಕೃತಿಕ ಸಂಪತ್ತಿನ ಮಹತ್ವ, ಹಸಿರು ಕ್ರಾಂತಿಯ ಜಾಗೃತಿ ಮೂಡಿಸುವ ದೃಷ್ಟಿಯಿಂದ ಹೊಂಗೆ, ಹುಣಸೆ, ಬೇವು, ಅರಳಿ ಇನ್ನಿತರ ಅರಣ್ಯ ಮರಗಳ ಬೀಜಗಳಿಂದ ಬೀಜದುಂಡೆಗಳನ್ನು ಮಾಡಿ ಮಳೆಗಾಲದಲ್ಲಿ ಅರಣ್ಯ ಭೂಮಿ ಮತ್ತು ಕಪ್ಪತಗುಡ್ಡ ವ್ಯಾಪ್ತಿಯ ಅರಣ್ಯ ಭೂಮಿಯಲ್ಲಿ ಹಾಕುವ ಉದ್ದೇಶ ಹೊಂದಲಾಗಿದೆ.


ಸೀಡ್ ಬಾಲ್ ತಯಾರಿಕೆಗೆ ಕೆಮ್ಮಣ್ಣು, ಸಾವಯವ ಗೊಬ್ಬರ ಬಳಸಿ ಸಾವಿರಾರು ಬೀಜದುಂಡೆಗಳನ್ನು(ಸೀಡಬಾಲ್) ತಯಾರಿಸಲಾಗಿದೆ ಎಂದು ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಉದಯಕುಮಾರ ಹಂಪಣ್ಣವರ ತಿಳಿಸಿದರು.


ಉಪಪ್ರಾಚಾರ್ಯ ಡಾ. ಪರಶುರಾಮ ಬಾರಕಿ, ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಪ್ರೊ. ಸೋಮಶೇಖರ ಕೆರಿಮನಿ ಮಾರ್ಗದರ್ಶನದಲ್ಲಿ ಸಾವಿರಾರು ಬೀಜದುಂಡೆಗಳನ್ನು (ಸೀಡಬಾಲ್) ವಿದ್ಯಾರ್ಥಿಗಳು ತಯಾರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net