

ಹಗರಿಬೊಮ್ಮನಹಳ್ಳಿ: ಕ್ಷೇತ್ರದ ರೈತರಿಗೆ ಬಿತ್ತನೆ ಬೀಜ ಹಾಗೂ ರಸಗೊಬ್ಬರ ಪೂರೈಕೆಯಲ್ಲಿ ಯಾವುದೇ ಕೊರತೆಯಾಗದಂತೆ ಕ್ರಮವಹಿಸಲಾಗುವುದು ಎಂದು ಶಾಸಕ ಕೆ.ನೇಮಿರಾಜ ನಾಯ್ಕ ಹೇಳಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ರೈತ ಸಂಪರ್ಕ ಕೇಂದ್ರ ಉದ್ಘಾಟಿಸಿ ಶುಕ್ರವಾರ ಮಾತನಾಡಿದರು. ಈ ಬಾರಿ ಸರ್ಕಾರದಿಂದ ನೀಡುತ್ತಿರುವ ಬಿತ್ತನೆ ಬೀಜಗಳಿಗೆ ಸಾಮಾನ್ಯ ವರ್ಗಕ್ಕೆ ಮೆಕ್ಕೆಜೋಳ ಒಂದು ಕೆ.ಜಿ.ಬೀಜಕ್ಕೆ 20 ರೂ., ಎಸ್ಸಿ, ಎಸ್ಟಿ ರೈತರಿಗೆ 30 ರೂ. ಸಬ್ಸಿಡಿ ನೀಡುತ್ತಿದ್ದು, ಕಡಿಮೆಯಾಗಿದೆ. ಹೆಚ್ಚಿಸುವಂತೆ ಕೃಷಿ ಸಚಿವರಿಗೆ ಶೀಘ್ರವೇ ಪತ್ರ ಬರೆದು ಒತ್ತಾಯಿಸುವೆ ಎಂದರು.
ಕೃಷಿ ಇಲಾಖೆ ಅಧಿಕಾರಿ ಎಚ್.ಸುನೀಲ್ ಮಾತನಾಡಿ, ಮುಂಗಾರು ಬಿತ್ತನೆ ಆರಂಭವಾಗಿದ್ದು, ತಾಲೂಕಿನಲ್ಲಿ ಒಟ್ಟು ಆರು ರೈತ ಸಂಪರ್ಕ ಕೇಂದ್ರಗಳನ್ನು ತೆರೆಯಲಾಗಿದೆ. ನಾಲ್ಕು ಹೋಬಳಿ ಕೇಂದ್ರ ಸೇರಿದಂತೆ ಪಟ್ಟಣದಲ್ಲಿ ಎರಡು ಹೆಚ್ಚುವರಿ ಕೇಂದ್ರಗಳನ್ನು ಆರಂಭಿಸಲಾಗಿದೆ. ರೈತರಿಗೆ ಬಿತ್ತನೆ ಬೀಜ ಪೂರೈಕೆಗೆ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಪುರಸಭೆ ಸದಸ್ಯರಾದ ನಾಗರಾಜ ಜನ್ನು, ಸುರೇಶ್ ಬಣಕಾರ, ಎಪಿಎಂಸಿ ಸದಸ್ಯ ಮೈನಳ್ಳಿ ಕೊಟ್ರೇಶ್, ಮುಖಂಡರಾದ ಬನ್ನಿಗೋಳ ವೆಂಕಣ್ಣ, ಬಾದಾಮಿ ಮೃತ್ಯುಂಜಯ, ಯು.ಕೆ.ಕೊಟ್ರೇಶ, ಕಿನ್ನಾಳ್ ಸುಭಾಷ್, ಎಂ.ಪಿ.ಕೊಟ್ರೇಶ, ಹನಸಿ ಸಿದ್ದೇಶ, ನಿಂಗರಾಜ್ ಯಾದವ್, ಸಂಪತ್ ನಾಯ್ಕ, ಬಣಕಾರ ಗೋಣೆಪ್ಪ, ಚಿತ್ತವಾಡ್ಗಿ ಪ್ರಕಾಶ್, ಎಚ್.ಎಂ.ವಿಜಯಕುಮಾರ್,
ಐನಳ್ಳಿ ಸೋಮಶೇಖರ್, ಸರ್ದಾರ್ ಯಮನೂರ, ಮೈನಳ್ಳಿ ಕೊಟ್ರೇಶಪ್ಪ, ಬಣಕಾರ ಕೊಟ್ರೇಶಪ್ಪ, ಕಡ್ಡಿ ಕೊಟ್ರೇಶ, ಎಚ್.ಎ.ಕೊಟ್ರೇಶ, ಲಕ್ಷ್ಮಣ ಕಲಾಲ್, ಸಿಎಚ್.ಸಿದ್ದರಾಜ್, ನಿಯಾಜ್, ತಳವಾರ ಕೊಟ್ರೇಶ, ಪವಾಡಿ ಸಣ್ಣ ಹನುಮಂತಪ್ಪ, ಕೃಷಿ ಅಧಿಕಾರಿಗಳಾದ ಎಚ್.ನಾಗರಾಜ, ನಾಗಾರ್ಜುನ್, ಪ್ರದೀಪ್ ಹಿರೇಮಠ್, ಚಂದ್ರಶೇಖರಯ್ಯ, ಶಶಿಕುಮಾರ್, ಭೋಜ್ಯನಾಯ್ಕ ಇತರರಿದ್ದರು.