

ಮಹಾಲಿಂಗಪುರ: ರೈತ ಸಂಪರ್ಕ ಕೇಂದ್ರದಲ್ಲಿ ಪ್ರಸಕ್ತ ಸಾಲಿನ ಬಿತ್ತನೆ ಬೀಜ ಮತ್ತು ಪರಿಕರ ವಿತರಣೆ ಕಾರ್ಯ ಮಂಗಳವಾರ ಆರಂಭಗೊಂಡಿತು.
ಮಹಾಲಿಂಗಪುರ ಸೇರಿದಂತೆ ಬುದ್ನಿ, ಪಿಡಿ, ಬಿಸನಾಳ, ಕೆಸರಗೊಪ್ಪ, ಸೈದಾಪುರ, ಸಂಗಾನಟ್ಟಿ, ಮದಭಾವಿ, ಮಾರಾಪುರ,ಢವಳೇಶ್ವರ ಹಾಗೂ ನಂದಗಾಂವ ಗ್ರಾಮಗಳ ರೈತರಿಗೆ ಮುಂಗಾರು ಹಂಗಾಮಿನ ಬೀಜ ಮತ್ತು ಪರಿಕರ ವಿತರಿಸಲಾಗುತ್ತಿದೆ. ವಿವಿಧ ರೀತಿಯ ಮತ್ತು ವಿವಿಧ ಕಂಪನಿಯ ಬೀಜಗಳು ಲಭ್ಯವಿದ್ದು, ಸರ್ಕಾರದ ಸಹಾಯಧನದಲ್ಲಿ ಸೋಯಾಬಿನ್ ಹಾಗೂ ಮೆಕ್ಕೆಜೋಳ ಬೀಜ ಲಭ್ಯವಿರುತ್ತವೆ. ್ರುಟ್ಸ್ ಐಡಿ ಮುಖಾಂತರ ಬೀಜ ಹಂಚಿಕೆ ಮಾಡಲಾಗುವುದು. ರೈತರು ಇದರ ಸದುಪಯೋಗ ಪಡಿಸಿಕೊಳ್ಳಬೇಕೆಂದು ಕೃಷಿ ಅಧಿಕಾರಿ ಟಿ.ಎಂ.ಡಾಂಗೆ ಪ್ರಕಟಣೆೆಯಲ್ಲಿ ತಿಳಿಸಿದ್ದಾರೆ.
ಯಾರ ಹೆಸರಿನಲ್ಲಿ ಜಮೀನು ಇರುತ್ತದೆಯೋ ಅವರ ಆಧಾರ್ ಕಾರ್ಡ್ ತರಬೇಕು. ಎಸ್‌ಸಿ, ಎಸ್‌ಟಿ ಲಾನುಭವಿಗಳು ಆಧಾರ್ ಕಾರ್ಡ್ ಜೆರಾಕ್ಸ್ ಮತ್ತು ಜಾತಿ ಪ್ರಮಾಣ ಪತ್ರ ತರಬೇಕು ಎಂದು ಅವರು ತಿಳಿಸಿದ್ದಾರೆ.