ಕಡಲಿಗೆ ಮರಿ ಕೂರ್ಮ ಪಡೆ

see turtle
Published on

ಕಾರವಾರ: ಇಲ್ಲಿನ ದೇವಬಾಗ ಕಡಲ ತೀರದಲ್ಲಿ ಅರಣ್ಯ ಇಲಾಖೆಯ ಮರೈನ್‌ ಇಕೋ ಸೆಲ್‌ ಸಂರಕ್ಷಿಸಿದ ಮೊಟ್ಟೆಗಳನ್ನು ಒಡೆದು, ಕಡಲಾಮೆಗಳು ಹೊರ ಬಂದಿದ್ದು, ಬುಧವಾರ ಅವುಗಳನ್ನು ಕಡಲಿಗೆ ಬಿಡಲಾಯಿತು.

ಸುಮಾರು 89 ಕಡಲಾಮೆ ಮರಿಗಳು ಹೊರ ಬಂದಿದ್ದು, ಅವುಗಳನ್ನು ಟ್ಯಾಗೋರ್‌ ಕಡಲ ತೀರಕ್ಕೆ ತಂದು ಸಮುದ್ರಕ್ಕೆ ಬಿಡಲಾಯಿತು.

ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯಾ ಅವರು ತಮ್ಮ ಪತಿ ಮಗನ ಜತೆ ಬಂದು ಮರಿಗಳನ್ನು ಸಮುದ್ರದೆಡೆಗೆ ಬಿಟ್ಟರು.  ಇದುವರೆಗೆ ಸುಮಾರು 110 ಮರಿಗಳನ್ನು ರಕ್ಷಿಸಿ, ಕಡಲಿಗೆ ಬಿಡಲಾಗಿದೆ.

ಡಿಎಫ್‌ಒ ಸಿ.ರವಿಶಂಕರ್‌, ಎಸಿಎಫ್‌ ಕೆ.ಡಿ.ನಾಯ್ಕ, ಆರ್‌ಎಫ್‌ಒಗಳಾದ ಗಜಾನನ ನಾಯ್ಕ, ಕಿರಣ್‌ ಇತರರು ಈ ಸಂದರ್ಭದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net