ವಿವಾದಕ್ಕೆ ಸಿಲುಕಿ ಕನ್ನಡ ಚಿತ್ರದಿಂದ ಬ್ಯಾನ್​​ ಆಗಿ ನಿಖಿತಾ ತುಕ್ರಾಲ್ ಕೆರಿಯರ್ ಹಾಳಾಯ್ತು! ನಟಿಗೆ ಎಷ್ಟು ದೊಡ್ಡ ಮಗಳಿದ್ದಾಳೆ ನೋಡಿ..

nikita thukral
Published on

ಬೆಂಗಳೂರು: ನಟ ದರ್ಶನ್‌, ಪುನೀತ್‌ ಸಿನಿಮಾಗಳಲ್ಲಿ ನಾಯಕಿಯಾಗಿ ಮಿಂಚಿದ್ದ ನಟಿ ನಿಖಿತಾ ತುಕ್ರಾಲ್‌. ಒಂದು ಕಾಲದಲ್ಲಿ ದಕ್ಷಿಣಭಾರತದಲ್ಲಿ ಸೂಪರ್‌ಸ್ಟಾರ್ ಆಗಿದ್ದ ನಟಿ. ವಿವಾಹಿತ ನಟನೊಂದಿಗಿನ ಸಂಬಂಧದ ನಂತರ ಆಕೆ  ವೃತ್ತಿಜೀವನ ಸಂಪೂರ್ಣ ಹಾಳಾಯ್ತು. ಈಗ ನಟಿ ಈಗ ಮದುವೆ ಆಗಿ ಗಂಡ ಮಕ್ಕಳ ಜತೆ ಸುಖವಾಗಿ ಸಂಸಾರ ನಡೆಸುತ್ತಿದ್ದಾರೆ.

ಪಂಜಾಬಿ ಕುಟುಂಬದಲ್ಲಿ ಜನಿಸಿ, ಮುಂಬೈನಲ್ಲಿ ಬೆಳೆದು ಸೌತ್ ಸಿನಿ ಇಂಡಸ್ಟ್ರಿಯಲ್ಲಿ ಹೆಸರು ಮಾಡಿದ ನಿಖಿತಾ ತುಕ್ರಾಲ್‌. ಮುಂಬೈನ ಕಿಶಿಂಚಂದ್ ಚೆಲ್ಲರಾಮ್ ಕಾಲೇಜಿನಲ್ಲಿ ಅರ್ಥಶಾಸ್ತ್ರದಲ್ಲಿ ಎಂ.ಎ. ಓದುತ್ತಿದ್ದಾಗ ಆಕೆಯನ್ನು ನಿರ್ಮಾಪಕ ಡಿ ರಾಮನಾಯ್ಡು ಗುರುತಿಸಿದರು. ನಂತರ ಅವರು ತಮ್ಮ ಮುಂಬರುವ ಚಿತ್ರ 'ಹೈ' (2002) ನಲ್ಲಿ ಪಾತ್ರವನ್ನು ನೀಡಿದರು.

ಪುನೀತ್ ಜೊತೆ 'ವಂಶಿ', ದರ್ಶನ್ ಜೊತೆ 'ಪ್ರಿನ್ಸ್', 'ಸಂಗೊಳ್ಳಿ ರಾಯಣ್ಣ' ಮತ್ತು 'ಯೋಧ' ಚಿತ್ರದಲ್ಲಿ ಮಿಂಚಿರುವ ಬಹುಬಾಷಾ ನಟಿ ನಿಖಿತಾ ಕೆಲವು ವಿವಾದಗಳಿಂದ ಕೂಡ ಗಾಂಧಿನಗರದಲ್ಲಿ ಸುದ್ದಿ ಮಾಡಿದ್ದರು.

ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡದಲ್ಲಿ ಹತ್ತಾರು ಚಿತ್ರಗಳಲ್ಲಿ ಕೆಲಸ ಮಾಡಿದರು. ಆದರೆ, ವಿವಾಹಿತ ನಾಯಕನೊಂದಿಗಿನ ಸಂಬಂಧದಿಂದಾಗಿ ಆಕೆಯ ವೃತ್ತಿಜೀವನವು ನಾಶವಾಯಿತು. ಕನ್ನಡದ ನಟನೊಬ್ಬನೊಂದಿಗೆ ನಿಖಿತಾ ಸಂಬಂಧ ಹೊಂದಿದ್ದರು. ಇಬ್ಬರೂ ಜೊತೆಗೆ ಕೆಲಸ ಮಾಡುವಾಗ ಪ್ರೀತಿಸುತ್ತಿದ್ದರು ಆದರೆ, ಆ ನಟನಿಗೆ ಈಗಾಗಲೇ ಮದುವೆಯಾಗಿದ್ದು, ಇವರಿಬ್ಬರ ಸಂಬಂಧದ ಸುದ್ದಿ ಕನ್ನಡ ಇಂಡಸ್ಟ್ರಿಯಾದ್ಯಂತ ಹಬ್ಬಿದ್ದು, ಈ ಕಾರಣಕ್ಕೆ ಸಾಕಷ್ಟು ಕೋಲಾಹಲ ಎದ್ದಿತ್ತು. ನಂತರ ಆ ನಟನ ಪತ್ನಿ, ನಿಖಿತಾ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದು, ಪೊಲೀಸರಲ್ಲಿ ಪ್ರಕರಣವನ್ನೂ ದಾಖಲಿಸಿದರು.

nikitathukral

ನಟನ ಪತ್ನಿ ತನ್ನ ಗಂಡನ ಅನೈತಿಕ ಸಂಬಂಧದಿಂದ ಕುಪಿತಳಾಗಿದ್ದು, ಆತನ ಮೇಲೆ ಹಲ್ಲೆ ಹಾಗೂ ಕೌಟುಂಬಿಕ ದೌರ್ಜನ್ಯದ ಆರೋಪವನ್ನೂ ಮಾಡಿದರು. ಗಂಡ ಗನ್ ತೋರಿಸಿ ಕೊಲೆ ಬೆದರಿಕೆ ಕೂಡ ಹಾಕಿದ್ದಾನೆ ಎಂದು ಪತ್ನಿ ಆರೋಪಿಸಿದ್ದರು. ಇದಾದ ಬಳಿಕ, ಚಿತ್ರರಂಗದಲ್ಲಿ ಭಾರೀ ಗದ್ದಲದ ನಂತರ, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘವು ನಿಕಿತಾ ಅವರನ್ನು ಮೂರು ವರ್ಷಗಳ ಕಾಲ ನಿಷೇಧಿಸಿತು.  ನಿಕಿತಾ ತುಕ್ರಾಲ್ ನಿರ್ದೇಶಕರ ದೃಷ್ಟಿಯಲ್ಲಿ ವಿವಾದಾತ್ಮಕ ಮುಖವಾಗಿದ್ದರು. ಇದರಿಂದಲೇ ಆಕೆಗೆ ಯಾವುದೇ ಕೆಲಸ ಸಿಗದೆ ಚಿತ್ರರಂಗದಿಂದ ದೂರಸರಿಯಬೇಕಾಯಿತು.

ಬಿಗ್‌ ಬಾಸ್‌ ಕನ್ನಡ ಮೊದಲ ಸೀಸನ್‌ನಲ್ಲಿ ನಿಖಿತಾ ಭಾಗವಹಿಸಿದ್ದರು.ನಟಿ 2017ರಲ್ಲಿ ಉದ್ಯಮಿ ಗಗನ್‌ದೀಪ್ ಸಿಂಗ್ ಮಾಗೊ ಅವರನ್ನು ವಿವಾಹವಾದರು. ಚಲನಚಿತ್ರ ಪ್ರಪಂಚದಿಂದ ಸಂಪೂರ್ಣವಾಗಿ ದೂರವಾದರು. ಈಗ ನಿಕಿತಾ ಮಗಳ ತಾಯಿಯಾಗಿದ್ದು, ಕುಟುಂಬದೊಂದಿಗೆ ಖುಷಿಯಿಂದ ಜೀವನ ನಡೆಸುತ್ತಿದ್ದಾರೆ. ಮುಂಬೈನಲ್ಲೇ ಸೆಟ್ಲ್ ಆದರು. 

ನಿಖಿತಾ ಮತ್ತು ಗಗನ್ ಮಗಳ ಹೆಸರು ಜಸ್ಮಿರಾ.ಮಗಳ ಜೊತೆ ಹೆಚ್ಚು ಕಾಲ ಕಳೆಯುತ್ತಿದ್ದಾರೆ ನಿಖಿತಾ. ನಟನೆ ವಿಚಾರದಲ್ಲಿ ಒಳ್ಳೆಯ ಹೆಸರು ಮಾಡಿದ್ದ ನಿಖಿತಾ ಈಗ ಸಾಂಸಾರಿಕ ಜೀವನದಲ್ಲಿ ಬ್ಯುಸಿಯಾಗಿದ್ದಾರೆ. ಆಗಾಗ ಸೋಶಿಯಲ್​ ಮೀಡಿಯಾದಲ್ಲಿ ಮಗಳ ಜತೆ ಕೆಲವು ವಿಡಿಯೋ ಹಾಗೋ ಫೊಟೋಗಳನ್ನು ಇನ್​ಸ್ಟಾಗ್ರಾಮ್​​ ಮೂಲಕವಾಗಿ ಹಂಚಿಕೊಳ್ಳುತ್ತಿರುತ್ತಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net