ದೇವರು, ಗುರು ಇಬ್ಬರನ್ನೂ ಸಮಾನವಾಗಿ ಕಾಣಿ

dahavalgi 9-2
ಢವಳಗಿ ಗ್ರಾಮದ ಶ್ರೀ ಮಡಿವಾಳೇಶ್ವರರ 518ನೇ ಜಾತ್ರೆ ನಿಮಿತ್ತ ಶನಿವಾರ ನಡೆದ ಅಡ್ಡಪಲ್ಲಕ್ಕಿ ಮಹೋತ್ಸವ, ಧರ್ಮಸಭೆ ಮತ್ತು ಸನ್ಮಾನ ಸಮಾರಂಭವನ್ನು ಶ್ರೀಗಳು ಹಾಗೂ ಗಣ್ಯರು ಉದ್ಘಾಟಿಸಿದರು. ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಶಿವಾಚಾರ್ಯ ಭಗವಾತ್ಪಾದರು, ಬಸವನಬಾಗೇವಾಡಿ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಒಡೆಯರ, ಕರಬಂಟನಾಳದ ಶಿವಕುಮಾರ ಮಹಾಸ್ವಾಮಿಗಳು, ಶಾಸಕ ಸಿ. ಎಸ್. ನಾಡಗೌಡ ಅಪ್ಪಾಜಿ ಇತರರಿದ್ದರು.
Published on

ಢವಳಗಿ: ಪ್ರಪಂಚದಲ್ಲಿ ಜೀವಿಗಳ ಜನನ ಎಷ್ಟು ಮುಖ್ಯವೋ, ಅಷ್ಟೇ ಮರಣವೂ ಮುಖ್ಯ. ದೇವರೆಂದರೆ ಗುರು, ಗುರು ಎಂದರೆ ದೇವರು. ದೇವರು ಮತ್ತು ಗುರುವಿನಲ್ಲಿ ಬೇಧ ಮಾಡದೆ ಇಬ್ಬರನ್ನು ಸಮಾನವಾಗಿ ಕಾಣಬೇಕು ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಶಿವಾಚಾರ್ಯ ಭಗವಾತ್ಪಾದರು ಹೇಳಿದರು.

ಗ್ರಾಮದ ಶ್ರೀ ಮಡಿವಾಳೇಶ್ವರರ 518ನೇ ಜಾತ್ರೆ ನಿಮಿತ್ತ ಶನಿವಾರ ನಡೆದ ಅಡ್ಡಪಲ್ಲಕ್ಕಿ ಮಹೋತ್ಸವ, ಧರ್ಮಸಭೆ ಮತ್ತು ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ದೇವರೇ ಗುರುವಿನ ಸ್ವರೂಪ. ಅವರಲ್ಲಿ ಯಾವತ್ತು ಬೇಧವೇ ಇಲ್ಲ. ಸೃಷ್ಟಿ ಮಾಡುವವನು ಬ್ರಹ್ಮ ದೇವರಾದರೆ, ಕಾಪಾಡವವನು ವಿಷ್ಣು ದೇವರು ಮತ್ತು ಲಯಾ ಮಾಡುವವನು ಮಹೇಶ್ವರ ಎಂದರು.

ನಿಮ್ಮ ಬದುಕಿನಲ್ಲಿ ನಿಮ್ಮ ವಂಶಾವಳಿಯ ಎಲ್ಲ ಕುಟುಂಬದವರು ಬದುಕಿದ್ದರೆ ನಿಮ್ಮ ಮನೆಯಲ್ಲಿ ಉಳಿಯಲು ಯಾರಿಗೆ ಜಾಗ ಇರುತ್ತಿತ್ತು? ಮುಂದಿನ ಪ್ರಪಂಚಕ್ಕೆ ಹುಟ್ಟು ಸಾವು ಎರಡೂ ಮುಖ್ಯವಾಗಿವೆ. ದೇವರು ದೇವರಷ್ಟೇ ಆಗದೆ ಒಮ್ಮೊಮ್ಮೆ ಗುರುವೂ ಆಗುತ್ತಾನೆ. ಗುರುವೂ ಕೂಡ ಒಮ್ಮೆ ದೇವರಾಗುತ್ತಾನೆ. ಅದಕ್ಕಾಗಿ ಇಬ್ಬರನ್ನೂ ಸಮಾನವಾಗಿ ಕಾಣಬೇಕಿದೆ. ನಮ್ಮೊಳಗೆ ಅನಾದಿಕಾಲದಿಂದ ವಾಸ ಮಾಡುತ್ತಿರುವ ಅಜ್ಞಾನವನ್ನು ಗುರು ನಾಶಮಾಡುತ್ತಾನೆ. ಬ್ರಹ್ಮ, ವಿಷ್ಣು, ಮಹೇಶ್ವರರ ಮೂಲ ಸ್ವರೂಪವೇ ಪರಬ್ರಹ್ಮನೇ ಒಬ್ಬ ಗುರುವೇ ಆಗಿದ್ದಾನೆ. ದೇವರು ನಮ್ಮ ಕಣ್ಣಿಗೆ ಕಾಣುವುದಿಲ್ಲ. ಆ ದೇವರೇ ನಮ್ಮಲ್ಲಿರುವ ಅಜ್ಞಾನ ಕಳೆದು ಸುಜ್ಞಾನ ಬೆಳಗಿಸುವನು ಎಂದು ತಿಳಿಸಿದರು.

ಬಸವನಬಾಗೇವಾಡಿ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಒಡೆಯರ, ಕರಬಂಟನಾಳದ ಶಿವಕುಮಾರ ಮಹಾಸ್ವಾಮಿಗಳು, ಜಮಖಂಡಿಯ ಗೌರಿಶಂಕರ ಶಿವಾಚಾರ್ಯರು, ಗದ್ದುಗೆಮಠದ ಧರ್ಮಾಧಿಕಾರಿ ಘನಮಠೇಶ್ವರ ಸ್ವಾಮೀಜಿ, ಮರಿದೇವರಾದ ಜಯಸೂರ್ಯ ಗದ್ದಗೆಮಠ,

ಬಂಟನೂರದ ಕಾಶಿಬಾಯಿ ಅಮ್ಮ, ಶಾಸಕ ಸಿ. ಎಸ್. ನಾಡಗೌಡ ಅಪ್ಪಾಜಿ ಮಾತನಾಡಿದರು.

ಬೆಳ್ಳಿ ಮೂರ್ತಿದಾನಿ ಕೆ. ಎಸ್. ಗೌಡರ್, ಡಾ. ಪ್ರಭು ಕೋರಿ, ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಬಾಲಾಜಿ ಶುಗರ್ಸ್‌ ನಿರ್ದೇಶಕ ರಾಹುಲ್ ಪಾಟೀಲ, ಉದ್ದಿಮೆದಾರ ಮಹಾಂತಗೌಡ ಬಿರಾದಾರ, ಪ್ರವಚನಕಾರ ನಾಗಭೂಷಣ ಶಾಸಿಗಳು, ಗವಾಯಿ ನಾಗರಾಜ ಹೂಗಾರ, ತಬಲಾ ಚತುರ ರಾಜಶೇಖರ ಗೆಜ್ಜಿ ಇದ್ದರು. ವಿನಯಕುಮಾರ ಹಿರೇಮಠ ಮತ್ತು ರಮೇಶ ಮಠಪತಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net