

ಸೇಡಂ: ತಾಲೂಕಿನ ಬೆನಕನಹಳ್ಳಿ ಗ್ರಾಮದಲ್ಲಿ ಸ್ಥಾಪಿಸಿದ ಪರಿಸರ ಸ್ನೇಹಿ ಗಣಪನ ವಿಸರ್ಜನೆ ಸೋಮವಾರ ಅದ್ದೂರಿಯಾಗಿ ಜರುಗಿತು.
21ದಿನಗಳ ಕಾಲ ಮಣ್ಣು ತಂದು ಗಣೇಶನನ್ನು ಕೂರಿಸುವ ಸ್ಥಳದಲ್ಲಿಯೇ ಪರಿಸರ ಸ್ನೇಹಿ ಗಣಪ ಸ್ಥಾಪನೆ ಮಾಡುವದು ವಿಶೇಷ. ಗ್ರಾಮಸ್ಥರು, ತಮ್ಮ ಬೀಗರು, ಸಂಬಂದಿಕರನ್ನು ಕರೆಸಿ ಹಬ್ಬದಂತೆ ಸಂಭ್ರಮಿಸುತ್ತಾರೆ. ಸಾವಿರಾರು ಸಂಖ್ಯೆಯಲ್ಲಿ ಸೇರುವ ಗಣೇಶನ ಭಕ್ತರು ವಿಸರ್ಜನೆಯಲ್ಲಿ ಭಾಗಿಯಾಗುತ್ತಾರೆ.
ಈ ವೇಳೆ ಬೆನಕೋತ್ಸವ ಸಮಿತಿಯ ಪ್ರಮುಖರಾದ ಅನಂತೇಶ್ವರೆಡ್ಡಿ ಪಾಟೀಲ್, ಶಿವಲಿಂಗರೆಡ್ಡಿ ಪಾಟೀಲ್ ಸೇರಿದಂತೆ ಅನೇಕರಿದ್ದರು.