ಡಾ. ಬಿ.ವಿ. ಶಿರೂರಗೆ ಸೇಡಿಯಾಪು ಪ್ರಶಸ್ತಿ

Published on

ಹುಬ್ಬಳ್ಳಿ: ಉಡುಪಿಯ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರದವರು ಕೊಡಮಾಡುವ ಸೇಡಿಯಾಪು ಪ್ರಶಸ್ತಿ- 2024 ನಗರದ ಸಾಹಿತಿ, ಕರ್ನಾಟಕ ವಿಶ್ವವಿದ್ಯಾಲಯ ಕನ್ನಡ ಅಧ್ಯಯನ ಪೀಠದಲ್ಲಿ ಜೈನ ಸಾಹಿತ್ಯ ಪ್ರವಾಚಕರಾಗಿ ಸೇವಾ ನಿವೃತ್ತರಾದ ಡಾ. ಬಿ.ವಿ. ಶಿರೂರ ಅವರಿಗೆ ಲಭಿಸಿದೆ.

ಪ್ರಶಸ್ತಿ ಪ್ರದಾನ ಸಮಾರಂಭವು ಜು. 22ರಂದು ಬೆಳಗ್ಗೆ 11.45ಕ್ಕೆ ನಗರದ ಗೋಕುಲ ರಸ್ತೆ ಮಂಜುನಾಥನಗರದ ಮನೆ ನಂಬರ್ 13ರಲ್ಲಿ ನಡೆಯಲಿದೆ.

ಕಾಡಸಿದ್ದೇಶ್ವರ ಕಲಾ ಮಹಾವಿದ್ಯಾಲಯ ಪ್ರಾಚಾರ್ಯ ಡಾ. ಉಮಾ ನೆರ್ಲೆ, ಉಡುಪಿಯ ನಿವತ್ತ ಪ್ರಾಚಾರ್ಯ ಹಾಗೂ ಹಿರಿಯ ವಿದ್ವಾಂಸ ಡಾ. ಪಾದೇಕಲ್ಲು ವಿಷ್ಣುಭಟ್ ಅವರು ಉಪಸ್ಥಿತರಿರುವರು ಎಂದು ಬಸವ ಪರಿಸರ ಸಂರಣಾ ಸಮಿತಿಯ ಕಾರ್ಯದರ್ಶಿ ಡಾ. ಸುರೇಶ ಹೊರಕೇರಿ ತಿಳಿಸಿದ್ದಾರೆ.

ಕನ್ನಡ ವಿದ್ವಾಂಸರಾದ ಡಾ. ಶಿರೂರ ಅವರು, 150ಕ್ಕೂ ಹೆಚ್ಚು ಸಂಶೋಧನ ಲೇಖನಗಳನ್ನು ಬರೆದಿದ್ದಾರೆ. ಐವತ್ತು ಗ್ರಂಥಗಳನ್ನು ಪ್ರಕಟಿಸಿದ್ದು, ಹಲವು ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.

ಅಧ್ಯಯನಶೀಲರಾದ ಇವರು ಬಸವ ತತ್ವ ಪ್ರಸಾರ, ಶರಣರ ಸಾಹಿತ್ಯ ಪ್ರವಚನ ಮುಂತಾದ ಸಾಹಿತ್ಯ, ಸಾಂಸ್ಕೃತಿಕ, ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net