ದೇಶದ್ರೋಹಿಗಳ ವಿರುದ್ಧ ಹೋರಾಟ ನಿರಂತರ

09-10jvg02
ಜೇವರ್ಗಿಯಲ್ಲಿ ಶ್ರೀರಾಮ ಸೇನಾ ಪ್ರತಿಷ್ಠಾಪಿಸಿದ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಆಂದೋಲಾ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿದರು. ಬಸವಕಲ್ಯಾಣ ಶಾಸಕ ಶರಣು ಸಲಗಾರ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರz್ದೆÃವಾಡಗಿ ಇತರರಿದ್ದರು.
Published on

ಜೇವರ್ಗಿ: ನಾವು ಯಾವುದೇ ಸಮುದಾಯದ ವಿರೋಧಿಗಳಲ್ಲ. ದೇಶದಲ್ಲಿ ಇದ್ದುಕೊಂಡು ದ್ರೋಹದ ಕೆಲಸ ಮಾಡುವವರ ವಿರುದ್ಧ ನಮ್ಮ ಹೋರಾಟ ನಿರಂತರವಾಗಿರುತ್ತದೆ ಎಂದು ಶ್ರೀರಾಮ ಸೇನಾ ರಾಜ್ಯ ಕಾರ್ಯಾಧ್ಯಕ್ಷ, ಆಂದೋಲಾ ಕರುಣೇಶ್ವರ ಮಠದ ಪೀಠಾಧಿಪತಿ ಶ್ರೀ ಸಿದ್ಧಲಿಂಗ ಸ್ವಾಮೀಜಿ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಶ್ರೀರಾಮ ಸೇನಾ ಗಣೇಶ ವಿಸರ್ಜನಾ ಮೆರವಣಿಗೆಯಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರ ಹಿಂದುಗಳ ಪರ ಮಾತನಾಡಿದರೆ ಕೇಸ್ ಹಾಕುವ ರೂಢಿ ಮಾಡಿಕೊಂಡಿದೆ. ಹಿಂದುಗಳನ್ನು ಕೆಣಕಿದರೆ ಯಾವ ಸರ್ಕಾರವೂ ಉಳಿಯಲ್ಲ. ಎಷ್ಟೇ ಕೇಸ್ ಹಾಕಿದರೂ ಹಿಂದುಗಳ ರಕ್ಷಣೆಗೆ ನಾವು ಸದಾ ಸಿದ್ಧ ಎಂದು ಗುಡುಗಿದರು.

ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಇರುವವರೆಗೆ ಹಿಂದುಗಳು ಮತ್ತು ದೇಶ ಸುಭದ್ರವಾಗಿರಲಿದೆ. ಮುಂದೆಯೂ ಮೋದಿ ಅಧಿಕಾರ ವಹಿಸಿಕೊಳ್ಳುವುದು ಖಚಿತ. ರಾಹುಲ್ ಗಾಂಧಿ ಕೈಗೆ ಅಧಿಕಾರ ಕೊಟ್ಟರೆ ದೇಶದ ಅಂಗ ಕಾಶ್ಮೀರ ಉಳಿಯುವುದಿಲ್ಲ. ಸದೃಢ ರಾಷ್ಟç ನಿರ್ಮಾಣಕ್ಕೆ ಮೋದಿ ಅಗತ್ಯ ಎಂದರು.

ಬಸವಕಲ್ಯಾಣ ಶಾಸಕ ಶರಣು ಸಲಗರ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ರೇವಣಸಿದ್ದಪ್ಪ ಸಂಕಾಲಿ, ಶ್ರೀರಾಮಸೇನಾ ತಾಲೂಕು ಅಧ್ಯಕ್ಷ ಮಲ್ಕಣ್ಣ ಹಿರೇಪೂಜಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net