ಜಾತ್ಯತೀತ ನಿಲುವು ಹೊಂದಿದವರಿಗೆ ಬೆಂಬಲ

CTD 03 Yathiraj-04
Published on

ಚಿತ್ರದುರ್ಗ: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜಾತ್ಯತೀತ ನಿಲುವು ಹೊಂದಿರುವವರನ್ನು ಬೆಂಬಲಿಸಲು ನಿರ್ಧರಿಸಲಾಗಿದೆ ಎಂದು ಎದ್ದೇಳು ಕರ್ನಾಟಕ ಆಂದೋಲನದ ಯತಿರಾಜ್ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೋಮುವಾದ, ದ್ವೇಷ ರಾಜಕಾರಣ ಮಾಡುವವರನ್ನು ಅಧಿಕಾರದಿಂದ ದೂರವಿಡಬೇಕಿದೆ. ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬೆಲೆ ಏರಿಕೆಯಿಂದಾಗಿ ಜನ ತತ್ತರಿಸಿದ್ದಾರೆ.

ಗುಣಮಟ್ಟದ ಶಿಕ್ಷಣ ಕೈಗೆಟಕುವಂತಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಚಿಂತಕ ನಾಗೇಶ್ ಮಾತನಾಡಿ, 2018ರ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ಸಿಕ್ಕಿರಲಿಲ್ಲ. ಹೀಗಾಗಿ ಅನ್ಯ ಪಕ್ಷದ ಶಾಸಕರನ್ನು ಖರೀದಿಸಿ ಅಡ್ಡದಾರಿಯಿಂದ ಅಧಿಕಾರಕ್ಕೆ ಬಂದಿದ್ದಾರೆ.

ಆದ್ದರಿಂದ ಈ ಬಾರಿ ಅಂತಹ ತಪ್ಪಾಗುವುದು ಬೇಡ. ಬಿಜೆಪಿ ಹೊರತುಪಡಿಸಿ ಜಾತ್ಯತೀತ ಪಕ್ಷಕ್ಕೆ ಈ ಬಾರಿಯ ಚುನಾವಣೆಯಲ್ಲಿ ಮತ ಚಲಾಯಿಸಿ ಸ್ಪಷ್ಟ ಬಹುಮತ ನೀಡಿ ಎಂದು ಮನವಿ ಮಾಡಿದರು.

ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಚಿತ್ರದುರ್ಗ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬೆಂಬಲಿಸಲು ತೀರ್ಮಾನಿಸಲಾಯಿತು.

ವಿವಿಧ ಸಂಘಟನೆಯ ಮುಖಂಡರಾದ ರಂಜಾನ್ ಚೌದ್ರಿ, ಎಂ.ಸಿ.ಒ. ಬಾಬು, ಟಿ.ಶಫಿವುಲ್ಲಾ, ಟಿಪ್ಪು ಖಾಸಿಂ ಆಲಿ, ಬೋರಯ್ಯ, ಶಿವಕುಮಾರ್, ಎ.ಜಾಕೀರ್‌ಹುಸೇನ್, ಮಂಜಣ್ಣ, ಸತ್ಯಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net