ಎಸ್ಸೆಸ್ಸೆಲ್ಸಿಯಲ್ಲಿ ನೆಲಮಮಲ ರಾಜ್ಯಕ್ಕೆ ದ್ವಿತೀಯ, ತಾಲೂಕಿನ 2,478 ವಿದ್ಯಾರ್ಥಿಗಳು ಉತ್ತೀರ್ಣ ಸಾಧಕರಿಗೆ ಸನ್ಮಾನ

11 Nela ph 14 SSLC Result abhinandne
Published on

ನೆಲಮಂಗಲ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ನೆಲಮಂಗಲ ತಾಲೂಕಿಗೆ ಶೇ.90 ಫಲಿತಾಂಶ ಬಂದಿದ್ದು, ರಾಜ್ಯದಲ್ಲಿ ದ್ವಿತೀಯ ದೊರೆತಿದೆ.

ತಾಲೂಕಿನ ಒಟ್ಟು 55 ಶಾಲೆಗಳ 2,764 ವಿದ್ಯಾರ್ಥಿಗಳ ಪೈಕಿ 2,478 ಮಂದಿ ಉತ್ತೀರ್ಣರಾಗಿದ್ದಾರೆ. ಸರ್ಕಾರಿ ಶಾಲೆ ಒಟ್ಟು ಶೇಕಡವಾರು ಫಲಿತಾಂಶ ಶೇ.90.31, ಅನುದಾನಿತ ಪ್ರೌಢಶಾಲೆಗಳಿಗೆ ಶೇ.83.81, ಅನುದಾನರಹಿತ ಪ್ರೌಢಶಾಲೆಳಿಗೆ ಶೇ.94.48 ಲಿತಾಂಶ ದೊರೆತಿದೆ.

ಶಾಲಾವಾರು ಶೇಕಡ ಫಲಿತಾಂಶದಲ್ಲಿ ತಾಲೂಕಿನ ಯಂಟಗಾನಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಮೋನಿಕಾ ಎಂ. (621), ಬಿ.ಪಿ.ಇಂಡಿಯನ್ (ಅನುದಾನರಹಿತ ಶಾಲೆ) ಪ್ರೌಢಶಾಲೆಯ ವಿದ್ಯಾರ್ಥಿನಿ ಸ್ಮತಿರಾವ್ 621 ಅಂಕಗಳಿಸಿದ್ದು, ಜಿಲ್ಲೆಗೆ ಪ್ರಥಮಸ್ಥಾನ ಪಡೆದುಕೊಂಡಿದ್ದಾರೆ. ಸೇಂಟ್ ಆನ್ಸ್ ಶಾಲೆಯ ಸಿಂಚನಾ 620 (ಅನುದಾನರಹಿತ ಶಾಲೆ) ದ್ವಿತೀಯ ಸ್ಥಾನ, ಯಂಟಗಾನಹಳ್ಳಿ ಸರ್ಕಾರಿ ಪ್ರೌಢಶಾಲೆಯ ಮೇಘನಾ ಎಂ.ಕೆ. 617 (ಸರ್ಕಾರಿ ಪ್ರೌಢಶಾಲೆ ಪೈಕಿ ಜಿಲ್ಲೆಗೆ ದ್ವಿತೀಯ ಸ್ಥಾನ) ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ.ರಮೇಶ್ ತಿಳಿಸಿದ್ದಾರೆ.

ಶೇ.100 ಫಲಿತಾಂಶ ಪಡೆದ ಶಾಲೆಗಳು: ತಾಲೂಕಿನ 21 ಶಾಲೆಗಳು ಶೇ. ಫಲಿತಾಂಶ ಪಡೆದುಕೊಂಡಿವೆ. ಸರ್ಕಾರಿ ಪ್ರೌಢಶಾಲೆಗಳ ಪೈಕಿ ಮಾರ್ಗೋಂಡನಹಳ್ಳಿ, ಸೋಲದೇವನಹಳ್ಳಿ, ಬೈರನಾಯಕನಹಳ್ಳಿ, ಮಣ್ಣೆ, ಎಲೆಕ್ಯಾತನಹಳ್ಳಿ, ದೇವರಹೊಸಹಳ್ಳಿ, ಯಂಟಗಾನಹಳ್ಳಿ, ಬರದಿಮಂಡಿಗೆರೆ, ದೊಡ್ಡಬೆಲೆ, ತ್ಯಾಮಗೊಂಡ್ಲು ಹಾಗೂ ನೆಲಮಂಗಲ ಸರ್ಕಾರಿ ಪ್ರೌಢಶಾಲೆ. ಅನುದಾನಿತ ಪ್ರೌಢಶಾಲೆ: ಬೈರಶೆಟ್ಟಿಹಳ್ಳಿ ಬೈಲಾಂಜನೇಯ ಪ್ರೌಢಶಾಲೆ, ಕುಲುವನಹಳ್ಳಿ ಎಸ್‌ಜೆಆರ್‌ಎಸ್, ವಿವೇಕಾನಂದ ಅರೆಬೊಮ್ಮನಹಳ್ಳಿ ಎಸ್‌ಎಲ್‌ಎನ್ ಪ್ರೌಢಶಾಲೆ. ಅನುದಾನರಹಿತ ಶಾಲೆ: ದಾಬಸ್‌ಪೇಟೆ ವಿವೇಕಾನಂದ ಪ್ರೌಢಶಾಲೆ, ನೆಲಮಂಗಲ ನಗರದ ನ್ಯೂಸೆಂಚುರಿ, ಸೇಂಟ್ ಆನ್ಸ್, ಥಾಮಸ್‌ಮೆಮೋರಿಯಲ್, ಸನ್ ರೈಸ್ ಆಂಗ್ಲಶಾಲೆ, ಸೇಂಟ್ ಥೆರಸಾ ಪ್ರೌಢಶಾಲೆ, ಎಂಇಎಸ್ ಪ್ರೌಢಶಾಲೆ, ಬಿ.ಪಿ.ಇಂಡಿಯನ್, ತ್ಯಾಮಗೊಂಡ್ಲು ನಿಸರ್ಗ ವಿದ್ಯಾನೀಕೇತನ, ಜ್ಞಾನಧಾಮ ಬೈರವೇಶ್ವರನಗರ ಮಾಗಡಿಕೆಂಪೇಗೌಡ, ಬೈರನಹಳ್ಳಿ ಎಸ್‌ಎಲ್‌ಆರ್ ಪಬ್ಲಿಕ್ ಶಾ ಶೇ.100 ಫಲಿತಾಂಶ ಪಡೆದುಕೊಂಡಿವೆ.

ಸಾಧಕರಿಗೆ ಸನ್ಮಾನ: ಜಿಲ್ಲೆಗೆ ಪ್ರಥಮ ಹಾಗೂ ದ್ವಿತೀಯ ಸ್ಥಾನಗಳಿಸಿದ ವಿದ್ಯಾರ್ಥಿನಿ ಮೋನಿಕಾ ಎಂ., ಸ್ಮತಿರಾವ್ ಹಾಗೂ ಮೇಘನಾ ಕೆ.ಎಂ. ಅವರನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಸಿ.ರಮೇಶ್ ಸನ್ಮಾನಿಸಿದರು. ವಿದ್ಯಾರ್ಥಿಗಳ ಪಾಲಕರು, ಮುಖ್ಯಶಿಕ್ಷಕ ಶ್ರೀನಿವಾಸ್, ಶಿಕ್ಷಕ ನಾರಾಯಣ್ ಮತ್ತಿತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net