ದ್ವಿತೀಯ ಪಿಯುಸಿ ಎರಡನೇ ಪರೀಕ್ಷೆ ಫಲಿತಾಂಶ ಪ್ರಕಟ: ಜಿಲ್ಲೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳೆಷ್ಟು ಗೊತ್ತಾ?

Secondary PUC Second Exam Result Declared mandya
Published on

ಮಂಡ್ಯ: ದ್ವಿತೀಯ ಪಿಯುಸಿ ಎರಡನೇ ಪರೀಕ್ಷೆಯ ಫಲಿತಾಂಶ ಪ್ರಕಟವಾಗಿದೆ. ಅಂತೆಯೇ ಜಿಲ್ಲೆಯಲ್ಲಿ 1,045 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಶೇ.32.04ರಷ್ಟು ಫಲಿತಾಂಶ ಬಂದಿದೆ. ಇನ್ನು ಈ ಪರೀಕ್ಷೆಯಲ್ಲಿಯೂ ಮತ್ತೆ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಮೊದಲ ಪರೀಕ್ಷೆಯಲ್ಲಿ ಶೇ.80.56ರಷ್ಟು ಫಲಿತಾಂಶದೊಂದಿಗೆ ಜಿಲ್ಲೆಯು 24ನೇ ಸ್ಥಾನ ಪಡೆದಿತ್ತು. ಎರಡನೇ ಪರೀಕ್ಷೆಗೆ 3,262 ವಿದ್ಯಾರ್ಥಿಗಳು ಹಾಜರಾಗಿದ್ದರು. ಈ ಪೈಕಿ 1,045 ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಇದರಲ್ಲಿ 1,717 ಬಾಲಕರು ಪರೀಕ್ಷೆ ಎದುರಿಸಿದ್ದು, 431 ವಿದ್ಯಾರ್ಥಿಗಳು ತೇರ್ಗಡೆಯಾಗುವ ಮೂಲಕ ಶೇ.25.1ರಷ್ಟು ಫಲಿತಾಂಶ ಬಂದಿದೆ. ಅಂತೆಯೇ 1,545 ಬಾಲಕಿಯರ ಪೈಕಿ 614 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದು, ಶೇ.39.74ರಷ್ಟು ಫಲಿತಾಂಶ ಲಭಿಸಿದೆ.
ಇನ್ನು ಹೊಸದಾಗಿ 2,538 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 916 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಖಾಸಗಿಯಾಗಿ 155 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 33 ವಿದ್ಯಾರ್ಥಿಗಳು ಪಾಸಾಗಿದ್ದಾರೆ. 569 ಪುನಾರವರ್ತಿತ ಅಭ್ಯರ್ಥಿಗಳು ಪರೀಕ್ಷೆ ಎದುರಿಸಿದ್ದು, 96 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ವಿಜ್ಞಾನ ವಿಭಾಗದ ಮುಂದು: ಎರಡನೇ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಬಾರಿ 1,267 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, 627 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.49.49ರಷ್ಟು ಫಲಿತಾಂಶ ಬಂದಿದೆ. 494 ಬಾಲಕರಲ್ಲಿ 231 ಹಾಗೂ 773 ಬಾಲಕಿಯರಲ್ಲಿ 396 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಕಲಾ ವಿಭಾಗದಲ್ಲಿ 1,030 ವಿದ್ಯಾರ್ಥಿಗಳ ಪೈಕಿ 225 ವಿದ್ಯಾರ್ಥಿಗಳು ಪಾಸಾಗಿದ್ದು, ಶೇ.21.84ರಷ್ಟು ಫಲಿತಾಂಶ ಲಭಿಸಿದೆ. 616 ಬಾಲಕರ ಪೈಕಿ 99 ಹಾಗೂ 414 ಬಾಲಕಿಯರ ಪೈಕಿ 126 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇನ್ನು ವಾಣಿಜ್ಯ ವಿಭಾಗದಲ್ಲಿ 965 ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದು, 193 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಶೇ.20ರಷ್ಟು ಫಲಿತಾಂಶ ಬಂದಿದೆ. 607 ಬಾಲಕರ ಪೈಕಿ 101 ಹಾಗೂ 358ರ ಪೈಕಿ 92 ವಿದ್ಯಾರ್ಥಿನಿಯರು ಪಾಸಾಗಿದ್ದಾರೆ.
ಇನ್ನು ಈ ಬಾರಿ ಉತ್ತೀರ್ಣರಾದವರಲ್ಲಿ ನಗರ ಭಾಗದ ವಿದ್ಯಾರ್ಥಿಗಳ ಸಂಖ್ಯೆ ಕೊಂಚ ಹೆಚ್ಚಿದೆ. 1,964 ವಿದ್ಯಾರ್ಥಿಗಳ ಪೈಕಿ 637 ವಿದ್ಯಾರ್ಥಿಗಳು ಪಾಸಾಗಿದ್ದು, ಶೇ.32.43ರಷ್ಟು ಫಲಿತಾಂಶ ಬಂದಿದೆ. 993 ಬಾಲಕರ ಪೈಕಿ 245 ಮತ್ತು 971 ಬಾಲಕಿಯರ ಪೈಕಿ 392 ವಿದ್ಯಾರ್ಥಿನಿಯರು ಉತ್ತೀರ್ಣರಾಗಿದ್ದಾರೆ. ಅಂತೆಯೇ ಗ್ರಾಮೀಣ ಭಾಗದಲ್ಲಿ ಪರೀಕ್ಷೆ ಎದುರಿಸಿದ್ದ 1,298 ವಿದ್ಯಾರ್ಥಿಗಳಲ್ಲಿ 408 ವಿದ್ಯಾರ್ಥಿಗಳು ಪಾಸಾಗುವುದರೊಂದಿಗೆ ಶೇ.31.43ರಷ್ಟು ಫಲಿತಾಂಶ ಗಳಿಸಿದ್ದಾರೆ. 724 ಬಾಲಕರ ಪೈಕಿ 186 ಹಾಗೂ 574 ಬಾಲಕಿಯರ ಪೈಕಿ 222 ಉತ್ತೀರ್ಣರಾಗಿದ್ದಾರೆ.

ದ್ವಿತೀಯ ಪಿಯುಸಿ ಎರಡನೇ ಪರೀಕ್ಷೆಯಲ್ಲಿ ಜಿಲ್ಲೆಗೆ ಶೇ.32.04ರಷ್ಟು ಫಲಿತಾಂಶ ಬಂದಿದೆ. ಅನುತ್ತೀರ್ಣರಾದವರಿಗೆ ಜೂ.24ರಿಂದ ಮೂರನೇ ಪರೀಕ್ಷೆ ನಡೆಯಲಿದ್ದು, ಅವಕಾಶವನ್ನು ಬಳಸಿಕೊಳ್ಳಬಹುದು.ಸಿ.ಚಲುವಯ್ಯಡಿಡಿಪಿಯು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net