ದ್ವಿತೀಯ ಪಿಯು ಎಕ್ಸಾಂ: ಪರಿಷ್ಕೃತ ವೇಳಾಪಟ್ಟಿ ಪ್ರಕಟ

PUC
Published on

ಬೆಂಗಳೂರು: ಪದವಿಪೂರ್ವ ಶಿಕ್ಷಣ ಇಲಾಖೆಯು 2021-22ನೇ ಸಾಲಿನ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆ ಅಂತಿಮ ವೇಳಾಪಟ್ಟಿಯಲ್ಲಿ ಅಲ್ಪ ಬದಲಾವಣೆ ಮಾಡಿ ಪರಿಷ್ಕೃತ ವೇಳಾಪಟ್ಟಿ ಪ್ರಕಟಿಸಿದೆ.

ಪರೀಕ್ಷೆ ಎಂದಿನಂತೆ ಏ.16ರಿಂದ ಮೇ 6ರವರೆಗೆ ನಡೆಯಲಿದೆ. ಏ.21ರಂದು ನಡೆಯಬೇಕಿದ್ದ ಭಾಷಾ ವಿಷಯಗಳಲ್ಲಿ ಉರ್ದು ಮತ್ತು ಅರೇಬಿಕ್ ವಿಷಯಗಳನ್ನು ಪ್ರತ್ಯೇಕಿಸಿ ಪರೀಕ್ಷೆ ನಡೆಸಲಾಗುತ್ತಿದೆ. ಆ ಪ್ರಕಾರವಾಗಿ ಏ.21ರಂದು ಉರ್ದು ಎಂದಿನಂತೆ ನಡೆಯಲಿದೆ. ಈ ಮೊದಲು ರಜೆ ಅವಧಿಯಾಗಿದ್ದ ಏ.29ಕ್ಕೆ ಅರೇಬಿಕ್ ಪರೀಕ್ಷೆ ನಡೆಸುತ್ತಿದೆ. ಹೆಚ್ಚಿನ ಮಾಹಿತಿಗೆ ಇಲಾಖೆ ವೆಬ್‌ಸೈಟ್ https://pue.kar.nic.in/ ನೋಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net