ಕಾಲೇಜಿಗೆಂದು ಹೋದ ದ್ವಿತೀಯ ಪಿಯು ವಿದ್ಯಾರ್ಥಿ ನಾಪತ್ತೆ

29 smg darshan (1)
Published on

ಶಿವಮೊಗ್ಗ: ನ್ಯಾಮತಿ ತಾಲೂಕಿನ ಸವಳಂಗ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿದ್ದು, ಕೋಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಲೂಕಿನ ಹೊಯ್ಸನಹಳ್ಳಿ ಗ್ರಾಮದ ಪುಷ್ಪಾವತಿ ಹಾಗೂ ವಿರೂಪಾಕ್ಷಪ್ಪ ದಂಪತಿ ಪುತ್ರ ದರ್ಶನ್(18) ನಾಪತ್ತೆಯಾದವ. ಈತ ನಗರದ ತನ್ನ ಚಿಕ್ಕಮ್ಮನ ಮನೆಯಲ್ಲಿ 3 ವರ್ಷದಿಂದ ವಾಸ್ಯವ್ಯ ಮಾಡುತ್ತಿದ್ದ. ಕಳೆದ ಫೆ. 23ರಂದು ಚಿಕ್ಕಮ್ಮನ ಮನೆಯಿಂದ ಕಾಲೇಜಿಗೆ ಹೋದವನು ನಾಪತ್ತೆಯಾಗಿದ್ದಾನೆ.
 5.6 ಅಡಿ ಎತ್ತರ, ದುಂಡು ಮುಖ, ಗೋಧಿ ಮೈಬಣ್ಣ, ಸಾಧಾರಣ ಮೈಕಟ್ಟು, ಕನ್ನಡ ಭಾಷೆ ಮಾತನಾಡಬಲ್ಲ.  ಕಾಲೇಜಿನ ಸಮವಸ್ತ್ರ ಧರಿಸಿದ್ದ ಎನ್ನಲಾಗಿದೆ. ಈತನ ಮಾಹಿತಿ ಸಿಕ್ಕಲ್ಲಿ ಕೋಟೆ ಪೊಲೀಸ್ ಠಾಣೆ (08182-261415)ಗೆ ಮಾಹಿತಿ ನೀಡಬಹುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net