

ಬೆಳಗಾವಿ: ನಗರದ ಆರ್‌ಎಲ್‌ಎಸ್ ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿ ಸಾಕ್ಷಿ ಸುರೇಶ್ ನೇರ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ.95ರಷ್ಟು ಅಂಕ ಪಡೆದು ಉತ್ತಮ ಸಾಧನೆ ಮಾಡಿದ್ದಾಳೆ. ಭೌತಶಾಸ್ತ್ರ ವಿಷಯದಲ್ಲಿ 96, ರಸಾಯನಶಾಸ್ತ್ರದಲ್ಲಿ 98, ಗಣಿತದಲ್ಲಿ 92, ಕಂಪ್ಯೂಟರ್ ಸೈನ್ಸ್‌ನಲ್ಲಿ 96, ಇಂಗ್ಲಿಷ್‌ನಲ್ಲಿ 94 ಹಾಗೂ ಹಿಂದಿ ಭಾಷೆಯಲ್ಲಿ 94 ಅಂಕ ಪಡೆದಿದ್ದಾಳೆ. ವಿದ್ಯಾರ್ಥಿನಿ ಸಾಧನೆಗೆ ಕಾಲೇಜು ಬೋಧಕ ವರ್ಗ, ಆಡಳಿತ ಮಂಡಳಿ, ಪಾಲಕರು ಹರ್ಷ ವ್ಯಕ್ತಪಡಿಸಿದ್ದಾರೆ.