ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯ ಮೊದಲ ದಿನವೇ ಲೀಕ್ ಆಯಿತಾ ಪ್ರಶ್ನೆಪತ್ರಿಕೆ?!

Phyics question paper leak 1 VJP 4 MAR 20
Published on

ವಿಜಯಪುರ: ರಾಜ್ಯಾದ್ಯಂತ ದ್ವಿತೀಯ ಪಿಯು ಪರೀಕ್ಷೆ ಬುಧವಾರ ಆರಂಭವಾಗಿದ್ದು, ಮೊದಲ ದಿನವೇ ಪ್ರಶ್ನೆ ಪತ್ರಿಕೆ ಲೀಕ್ ಆಗಿದೆ ಎಂಬ ಸುದ್ದಿ ಹರಿದಾಡಿದೆ. ಪಿಯುಸಿ ಸೈನ್ಸ್ ವಿಭಾಗದವರಿಗೆ ಇಂದು ಭೌತಶಾಸ್ತ್ರ ಪರೀಕ್ಷೆ ಇತ್ತು. ಪರೀಕ್ಷೆ ಶುರುವಾಗಿ ಒಂದು ಗಂಟೆ ಆಗುತ್ತಿದ್ದಂತೆ ಅನೇಕರ ಮೊಬೈಲ್​ಗಳಲ್ಲಿ ಪ್ರಶ್ನೆಪತ್ರಿಕೆ ಹರಿದಾಡಿದೆ.

ವಿಜಯಪುರ ಜಿಲ್ಲೆ ಇಂಡಿ ಪಟ್ಟಣದ ಶಾಂತೇಶ್ವರ ಪಿಯು ಕಾಲೇಜಿನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದ್ದು, ಪ್ರಶ್ನೆಪತ್ರಿಕೆ ಕೈಗೆ ಸಿಕ್ಕ ಕೂಡಲೇ ಪರೀಕ್ಷೆ ಬರೆಯಲು ಬಂದ ವಿದ್ಯಾರ್ಥಿಗಳ ಪೈಕಿ ಯಾರೋ ಒಬ್ಬರು ಕಿಟಕಿ ಬದಿ ಇದ್ದವರು ಪ್ರಶ್ನೆ ಪತ್ರಿಕೆ ಹೊರಗೆ ತೋರಿಸಿದಾಗ ಹೊರಗಿದ್ದವರು ಮೊಬೈಲ್ ಫೋನ್​ ಮೂಲಕ ಅದರ ಫೋಟೋ ತೆಗೆದು ವಾಟ್ಸ್​ಆ್ಯಪ್ ಮೂಲಕ ಹರಿಯಬಿಟ್ಟಂತೆ ಕಾಣಿಸುತ್ತಿದೆ. ಇದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ.

ಪರೀಕ್ಷಾ ಕೇಂದ್ರದ ಸುತ್ತ ಬಿಗಿಭದ್ರತೆ ಇದ್ದರೂ, ಪ್ರಶ್ನೆ ಪತ್ರಿಕೆ ಹೇಗೆ ಲೀಕ್ ಆಯಿತು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಇದರಲ್ಲಿ ಕಾಲೇಜು ಸಿಬ್ಬಂದಿಗಳ ಕೈವಾಡವೂ ಇದೆಯೇ ಎಂಬ ಶಂಕೆಯೂ ವ್ಯಕ್ತವಾಗಿದೆ. ಈ ಪರೀಕ್ಷೆ ಬೆಳಗ್ಗೆ 10.15ಕ್ಕೆ ಆರಂಭವಾಗಿದ್ದು, ಮಧ್ಯಾಹ್ನ 1.30ರ ತನಕ ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net