ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ

Second place in state level dance competition
Published on

ಮಡಿಕೇರಿ:

ಮೈಸೂರು ಮಿರಾಕಲ್ಸ್ ಡ್ಯಾನ್ಸ್ ಸ್ಟುಡಿಯೋ ಸಂಸ್ಥೆಯ 21ನೇ ವಾರ್ಷಿಕೋತ್ಸವದ ಅಂಗವಾಗಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಮಡಿಕೇರಿಯ ವಿಂಗ್ಸ್ ಆಫ್ ಫ್ಯಾಷನ್ ಡ್ಯಾನ್ಸ್ ಸ್ಟುಡಿಯೋ ದ್ವಿತೀಯ ಸ್ಥಾನ ಗೆದ್ದುಕೊಂಡಿದೆ.

ಮೈಸೂರಿನ ಜಗನ್ ಮೋಹನ್ ಪ್ಯಾಲೇಸ್‌ನಲ್ಲಿ ನಡೆದ ನೃತ್ಯ ಸ್ಪರ್ಧೆಯಲ್ಲಿ ಸೋಲೋ ಮತ್ತು ಕಪಲ್ ಡ್ಯಾನ್ಸ್ ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದುಕೊಂಡಿತು. ವಿಂಗ್ಸ್ ಆಫ್ ಪ್ಯಾಷನ್ ಡ್ಯಾನ್ಸ್ ಸ್ಟುಡಿಯೋದ ನೃತ್ಯ ಸಂಯೋಜಕಿ ಹಾಗೂ ನಿರ್ದೇಶಕಿ ಪ್ರೀತ ಕೃಷ್ಣಾ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net