ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ದ್ವಿತೀಯ

New Dr. Shreedhar New
Published on

ಹುಬ್ಬಳ್ಳಿ : ತಾಲೂಕಿನ ಕುಸುಗಲ್ಲ ಗ್ರಾಮದ ಅಂತಾರಾಷ್ಟ್ರೀಯ ಯೋಗಪಟು ಡಾ. ಶ್ರೀಧರ ಹೊಸಮನಿ ಮಹತ್ವದ ಸಾಧನೆ ಮಾಡಿದ್ದಾರೆ. ಥೈಲ್ಯಾಂಡ್ ದೇಶದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಅಂತಾರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿ, ಚಾಂಪಿಯನ್​ಶಿಪ್​ನಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಥೈಲ್ಯಾಂಡ್ ಯೂಥ್ ಯೋಗ ಅಸೋಸಿಯೇಷನ್, ವರ್ಲ್ಡ್ ಯೂಥ್ ಯೋಗ ಫೆಡರೇಷನ್, ಶಿವಮೊಗ್ಗದ ವರ್ಷಿಣಿ ಯೋಗ ಶಿಕ್ಷಣ ಮತ್ತು ಸಾಂಸ್ಕೃತಿಕ ಕ್ರೀಡಾ ಟ್ರಸ್ಟ್ ಸಹಭಾಗಿತ್ವದಲ್ಲಿ ಡಿ. 9ರಂದು ಥೈಲ್ಯಾಂಡ್​ನ ಪಟ್ಟಾಯ್ದಲ್ಲಿ ನಡೆದ 6ನೇ ವರ್ಷದ ಅಂತಾರಾಷ್ಟ್ರೀಯ ಯೋಗ ಸ್ಪರ್ಧೆಯಲ್ಲಿ ಭಾಗವಹಿಸಿ, 31-40 ವರ್ಷದ ವಯೋಮಿತಿಯಲ್ಲಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕ ಗೆದ್ದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net