ಎಸ್‌ಡಿಎಂ ಪಾಲಿಟೆಕ್ನಿಕ್ ದ್ವಿತೀಯ

Bel_SDM_Polytechnic
Published on

ಬೆಳ್ತಂಗಡಿ: ಮಂಗಳೂರಿನ ಕರ್ನಾಟಕ ಸರ್ಕಾರಿ ಪಾಲಿಟೆಕ್ನಿಕ್‌ನಲ್ಲಿ ಜರುಗಿದ ನಾಲ್ಕನೇ ಐಎಸ್‌ಟಿಇ ರಾಜ್ಯಮಟ್ಟದ ಪಾಲಿಟೆಕ್ನಿಕ್ ವಿದ್ಯಾರ್ಥಿಗಳ ಸಮಾವೇಶ-2024ರಲ್ಲಿ ನಡೆದ ಪ್ರಾಜೆಕ್ಟ್ ಸ್ಪರ್ಧೆಯಲ್ಲಿ ಉಜಿರೆಯ ಎಸ್‌ಡಿಎಂ ಪಾಲಿಟೆಕ್ನಿಕ್ ಕಾಲೇಜು ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಇಂಜಿನಿಯರಿಂಗ್ ವಿಭಾಗ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗಗಳಲ್ಲಿ ಪ್ರತ್ಯೇಕವಾಗಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದೆ.

ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಮಲ್ಟಿಪರ್ಪಸ್ ಅಗ್ರಿ ಟ್ರಾಲಿಯನ್ನು ವಿನ್ಯಾಸಗೊಳಿಸಲಾಗಿದೆ. ಆಧುನಿಕ ಕೃಷಿ ಪದ್ಧತಿಗೆ ಅನುಕೂಲವಾಗುವಲ್ಲಿ ಇದು ಸಹಕಾರಿಯಾಗಿದೆ. ಈ ಟ್ರಾಲಿಯನ್ನು ಬೈಕ್ ಮತ್ತು ಓಮ್ನಿ ಬಿಡಿಭಾಗಗಳನ್ನು ಬಳಸಿ ನಿರ್ಮಿಸಲಾಗಿದೆ. ವಿದ್ಯಾರ್ಥಿಗಳಾದ ಸುಮಂತ್ ಎಸ್.ಕೋಟೆ, ಮನ್ವಿತ್, ಎ.ಅಮೀನ್ ಅಹ್ಮದ್, ಚೇತನ್ ಎಂ., ಗುರುರಾಜ್ ಕೆ.ಮತ್ತು ವಿನಯ್ ಬಿ.ಪಿ. ಈ ಪ್ರಾಜೆಕ್ಟ್ ತಂಡದ ಸದಸ್ಯರಾಗಿದ್ದಾರೆ.

ಎಲೆಕ್ಟ್ರಾನಿಕ್ಸ್ ಮತ್ತು ಕಮ್ಯುನಿಕೇಶನ್ ಎಂಜಿನಿಯರಿಂಗ್ ವಿಭಾಗ ಎಂ.ಕ್ಯಾಮ್ (ಸ್ಮಾರ್ಟ್ ಸೆಕ್ಯೂರಿಟಿ ಕ್ಯಾಮರಾ) ಎಂಬ ಪ್ರಬಂಧ ಪ್ರಸ್ತುತಪಡಿಸಿದ್ದು, ಈ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಲಭಿಸಿದೆ. ಅಭಿಷೇಕ್ ಪ್ರಶಾಂತ್ ಮತ್ತು ರವಿಶಂಕರ್ ಪಾಟೀಲ್ ಈ ತಂಡದ ಸದಸ್ಯರಾಗಿದ್ದಾರೆ.

ಇವರಿಗೆ ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್, ವ್ಯವಸ್ಥಾಪಕ ಚಂದ್ರನಾಥ್ ಜೈನ್, ವಿಭಾಗ ಮುಖ್ಯಸ್ಥರು ಹಾಗೂ ಸಿಬ್ಬಂದಿ ಶುಭ ಹಾರೈಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net