ಎರಡನೇ ಬೆಳೆಗೆ ಸಮರ್ಪಕ ನೀರು ಒದಗಿಸಲಿ

6 KMP 01
ಕಂಪ್ಲಿಯಲ್ಲಿ ಆಯೋಜಿಸಿದ್ದ ರೈತ ಸಂಘಟನಾ ಸಭೆಯನ್ನು ಜಿಲ್ಲಾ ಸಮಿತಿ ಸದಸ್ಯ ಚೆಲ್ಲಾ ವೆಂಕಟನಾಯ್ಡು ಉದ್ಘಾಟಿಸಿದರು. ಪ್ರಮುಖರಾದ ಬಿ.ವಿ.ಗೌಡ, ಕೊಟ್ಟೂರು ರಮೇಶ, ತಿಮ್ಮಪ್ಪ ನಾಯಕ, ಡಾ.ಎ.ಸಿ.ದಾನಪ್ಪ,ನಾಗರಾಜ, ಜಡೆಪ್ಪ ಮೆಟ್ರಿ, ಸಣ್ಣಕ್ಕಿ ರುದ್ರಪ್ಪ, ಖಾಸೀಮ್‌ಸಾಬ್, ವಿ.ಟಿ.ನಾಗರಾಜ ಇತರರಿದ್ದರು.
Published on

ಕಂಪ್ಲಿ: ಜಲಾಶಯವಿದ್ದರೂ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಕಾಲಕ್ಕೆ ಕೃಷಿ ಭೂಮಿಗೆ ನೀರು ದೊರೆಯುತ್ತಿಲ್ಲ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜಿಲ್ಲಾಧ್ಯಕ್ಷ ಬಿ.ವಿ.ಗೌಡ ಆರೋಪಿಸಿದರು.

ಇಲ್ಲಿನ ಹೇರೂರು ವಿರುಪನಗೌಡ ತಾತನಮಠದ ಆವರಣದಲ್ಲಿ ಆಯೋಜಿದ್ದ ರೈತರ ಸಂಘಟನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದರು.

ನೀರಾವರಿ ಅಧಿಕಾರಿಗಳು ಆಂಧ್ರಕ್ಕೆ ನೀರು ತಲುಪಿಸಲು ತೋರುವ ಉತ್ಸಾಹ ರಾಜ್ಯದ ರೈತರ ಭೂಮಿಗೆ ನೀರೊದಗಿಸುವಲ್ಲಿ ತೋರುತ್ತಿಲ್ಲ. ಐಸಿಸಿ ಸಭೆ ಮುನಿರಾಬಾದಿನಲ್ಲಿ ನಡೆಸಬೇಕು. ಜಲಾಶಯದಲ್ಲಿ ನೀರಿರುವುದರಿಂದ ಎರಡನೇ ಬೆಳೆಗೆ ಪೂರ್ಣ ನೀರು ಒದಗಿಸಬೇಕು. ಪಟ್ಟಣದಲ್ಲಿ ಶಾಶ್ವತ ಭತ್ತ ಖರೀದಿ ಕೇಂದ್ರ ತೆರೆಯುವಲ್ಲಿ ಕೃಷಿ ಅಧಿಕಾರಿಗಳು ಜಾಗೃತಿ ತೋರಬೇಕು ಎಂದರು.

ಆಯ್ಕೆ: ಸಭೆಯಲ್ಲಿ ನಗರ, ತಾಲೂಕು ಘಟಕದ ಪದಾಧಿಕಾರಿಗಳ ಆಯ್ಕೆಮಾಡಿ ಆದೇಶಪತ್ರ ವಿತರಿಸಲಾಯಿತು. ಕೊಟ್ಟೂರು ರಮೇಶ(ತಾಲೂಕು ಕಾರ್ಯಾಧ್ಯಕ್ಷ), ಕೆ.ಸುದರ್ಶನ, ಕಾಗೆ ಈರಣ್ಣ (ತಾಲೂಕು ಉಪಾಧ್ಯಕ್ಷರು), ನಗರ ಘಟಕಕ್ಕೆ ತಿಮ್ಮಪ್ಪ ನಾಯಕ (ಅಧ್ಯಕ್ಷ), ಆದೋನಿ ರಂಗಪ್ಪ(ಗೌರವಾಧ್ಯಕ್ಷ), ಕುರಿ ಸಿದ್ದಪ್ಪ, ಯಲ್ಲಪ್ಪ, ಬಿ.ಕೆ.ದೇವೇಂದ್ರ.(ಉಪಾಧ್ಯಕ್ಷರು), ಬಿ.ಮಲ್ಲಿಕಾರ್ಜುನ(ಪ್ರಧಾನ ಕಾರ್ಯದರ್ಶಿ), ಟಿ.ಗಂಗಣ್ಣ(ಖಜಾಂಚಿ), ಸಿದ್ದಿ ಅಂಜನಪ್ಪ, ಮಲ್ಲಿಕಾರ್ಜುನ, ವೆಂಕಟರಮಣ, ಕಡಪ ಅಕ್ಬರ್, ವಿ.ಟಿ.ರಾಜು(ಸಂಘಟನಾ ಕಾರ್ಯದರ್ಶಿ), ಲಬೇದ್ ಯಮುನಪ್ಪ, ನಾಗರಾಜ, ಎಂ.ಮಂಜುನಾಥ, ಆದೋನಿ ನಾಗರಾಜ(ಸಂಚಾಲಕರು), ಎನ್.ನಾಗಪ್ಪ, ಕೆ.ಪೆದ್ದಣ್ಣ, ಹರ್ಷದ್, ಎನ್.ಈರಣ್ಣ, ಕುರುಬರ ಲಕ್ಷ್ಮಣ(ನಿರ್ದೇಶಕರು)ಆಯ್ಕೆಗೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net