

ಗುರುಪುರ: ಮೂಡುಶೆಡ್ಡೆಯ ಶಾರದಾ ವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿ ನಿಶಿತ್ ಕೆ. ನಾಯ್ಕ ಅವರು ಇತ್ತೀಚೆಗೆ ಉತ್ತರ ಪ್ರದೇಶದ ಗಾಜಿಯಾಬಾದ್ನಲ್ಲಿ ನಡೆದ ರಾಷ್ಟ್ರ ಮಟ್ಟದ 17ರ ವಯೋಮಿತಿಯೊಳಗಿನ ಬಾಲಕರ 81ಕಿಲೋಗಿಂತ ಕಡಿಮೆ ವಿಭಾಗದ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ.ಗಂಜಿಮಠದ ಕೇಶವ ನಾಯ್ಕ ಮತ್ತು ಪವಿತ್ರಾ ನಾಯ್ಕ ದಂಪತಿಯ ಪುತ್ರ.