ಎರಡನೇ ಹತ್ತಿ ಖರೀದಿ ಕೇಂದ್ರ ಆರಂಭ

26 DVD 01
ದೇವದುರ್ಗದ ಎಂಎಜಿ ಕಾಟಲ್ ಮಿಲ್‌ನಲ್ಲಿ ಕಾರ್ಪೋರೇಷನ್ ಆಫ್ ಇಂಡಿಯಾದಿಂದ ಹತ್ತಿ ಖರೀದಿ ಕೇಂದ್ರ ಆರಂಭಿಸಲಾಯಿತು. ಸಿಸಿಐ ಮುಖ್ಯಸ್ಥ ಕೇಶವಶರ್ಮ, ಸಿಸಿಐ ಅಧಿಕಾರಿ ಚೈತ್ರಾ, ಮುಖಂಡರಾದ ಮರಿಲಿಂಗ ಪಾಟೀಲ್, ಮಲ್ಲೇಶ ನಾಯಕ, ರಡ್ಡಿ ಯಾದವ್, ಕಾಟನ್‌ಜಿನ್ ಮಾಲೀಕ ಶಾಜೀದ ಖಾನ್ ಇತರರಿದ್ದರು.
Published on

ದೇವದುರ್ಗ: ಪಟ್ಟಣದ ಹೊರವಲಯದಲ್ಲಿರುವ ಎಂಎಜಿ ಕಾಟನ್ ಮಿಲ್‌ನಲ್ಲಿ ಕಾಟನ್ ಕಾರ್ಪೋರೇಷನ್ ಆಫ್ ಇಂಡಿಯಾದಿಂದ ಹತ್ತಿ ಖರೀದಿ ಕೇಂದ್ರ ಮಂಗಳವಾರ ಆರಂಭಿಸಲಾಯಿತು.

ಸಿಸಿಐ ಮುಖ್ಯಸ್ಥ ಕೇಶವಶರ್ಮ ಮಾತನಾಡಿ, ಹತ್ತಿಗೆ ಬೆಂಬಲ ಬೆಲೆಯೊಂದಿಗೆ ಖರೀದಿ ಕೇಂದ್ರ ಮಾಡಲಾಗಿದ್ದು ತಾಲೂಕಿಗೆ ನಾಲ್ಕು ಕೇಂದ್ರ ಮಂಜೂರಾಗಿವೆ. ಈಗಾಗಲೇ ಒಂದು ಕೇಂದ್ರ ಪಟ್ಟಣದಲ್ಲಿ ಕಾರ್ಯಾರಂಭಿಸಬೇಕು. ಈಗ ಎಂಎಜಿ ಮಿಲ್‌ನಲ್ಲಿ ಎರಡನೇ ಕೇಂದ್ರ ಪ್ರಾರಂಭಿಸಿದ್ದು ಶೀಘ್ರದಲ್ಲಿ ಇನ್ನೆರಡು ಕೇಂದ್ರ ಆರಂಭಿಸಲಾಗುವುದು.

ತೇವಾಂಶ ಪ್ರಕಾರ ಬೆಲೆ ನಿಗದಿ ಮಾಡಿದ್ದು 6,800ರಿಂದ 7,500ರೂ. ಬೆಲೆ ನಿಗದಿ ಮಾಡಲಾಗಿದೆ. ರೈತರು ಪಹಣಿ ಪತ್ರ, ಬ್ಯಾಂಕ್ ಪಾಸ್‌ಬುಕ್, ಪಹಣಿ ನೀಡಿ ಹೆಸರು ನೋಂದಾಯಿಸಿಕೊಳ್ಳಬೇಕು. ಪಾಳಿ ಪ್ರಕಾರ ಹತ್ತಿ ಮಾರಾಟ ಮಾಡಿದ ನಂತರ ನೇರವಾಗಿ ನಿಮ್ಮ ಬ್ಯಾಂಕ್ ಖಾತೆಗೆ ಜಮೆ ಆಗಲಿದೆ. ರೈತರು ಖರೀದಿ ಕೇಂದ್ರವನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ(ಕೋಡಿಹಳ್ಳಿ ಬಣ) ತಾಲೂಕು ಅಧ್ಯಕ್ಷ ಮರಿಲಿಂಗ ಪಾಟೀಲ್ ಮಾತನಾಡಿ, ತಾಲೂಕಿನಲ್ಲಿ ನಾಲ್ಕು ಹತ್ತಿ ಖರೀದಿ ಕೇಂದ್ರ ಮಂಜುರಾಗಿದ್ದರೂ ಒಂದೇ ಕೇಂದ್ರ ತೆರೆಯಲಾಗಿತ್ತು. ಇದರಿಂದ ರೈತರು ಹತ್ತಿ ಮಾರಾಟ ಮಾಡಲು ರಸ್ತೆ ಬದಿ ಸಾಲುಗಟ್ಟಿ ನಿಲ್ಲುವ ಸ್ಥಿತಿಯಿತ್ತು. ಉಳಿದ 3ಕೇಂದ್ರ ಆರಂಭಿಸಲು ರೈತ ಸಂಘ ಮನವಿ ಮಾಡಿತ್ತು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net