ಜು.12 ರಿಂದ ಎರಡನೇ ಬಸವ ಉತ್ಸವ ಕಾರ್ಯಕ್ರಮ-ಸಿದ್ರಾಮಪ್ಪ ಪಾಟೀಲ್

RAICHUR
RAICHUR
Published on

 ರಾಯಚೂರು ಎರಡನೇ ಬಸವ ಉತ್ಸವ ಜು.12 ಮತ್ತು 13 ರಂದು ನಗರದ ಗಂಜ್ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾಗಿದೆ ಎಂದು ರಾಷ್ಟ್ರೀಯ ಬಸವ ದಳ ಸಮಿತಿ ರಾಷ್ಟ್ರೀಯ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ್ ಹೇಳಿದರು.

ನಗರದ ಪತ್ರಿಕಾ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎರಡು ದಿನದ ಕಾರ್ಯಕ್ರಮದ ಸಾನಿಧ್ಯವನ್ನು ಕುಂಬಳಗೋಡು ಜ್ಞಾನಪೀಠ ಬಸವ ಗಂಗೋತ್ರಿ ಶ್ರೀ ಚನ್ನಬಸವೇಶ್ವರ ಪೀಠಾಧ್ಯಕ್ಷರಾದ ಡಾ.ಚನ್ನಬಸವಾನಂದ ಸ್ವಾಮೀಜಿ ವಹಿಸಲಿದ್ದಾರೆ. ಬೀದರ್ ಬಸವಮಂಟಪದ ಮಾತೆ ಸತ್ಯಾದೇವಿ,ಚಿಕ್ಕಮಗಳೂರಿನ ವಿಶ್ವಧರ್ಮ ಪೀಠದಜಯಬಸವ ವನದ ಡಾ.ಜಯಬಸವಾನಂದ ಸ್ವಾಮೀಜಿ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮವನ್ನು ಸಣ್ಣ ನೀರಾವರಿ ಸಚಿವ ಎನ್.ಎಸ್.ಬೋಸರಾಜ ಉದ್ಘಾಟಿಸಲಿದ್ದಾರೆ. ಅಧ್ಯಕ್ಷತೆಯನ್ನು ನಗರ ಶಾಸಕ ಡಾ.ಶಿವರಾಜ ಪಾಟೀಲ್‌ವಹಿಸಲಿದ್ದಾರೆ. ಇಷ್ಟಲಿಂಗಾರ್ಚನೆ ಗೀತೆಗಳ ಪುಸ್ತಕವನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್, ಶರಣವಂದನೆ ಪುಸ್ತಕವನ್ನು ಸಚಿತ ಸತೀಶ ಜಾರಕಿಹೊಳೆ ಬಿಡುಗಡೆಗೊಳಿಸಲಿದ್ದಾರೆ.

ಷಟ್ಸಸ್ಥಲ್ ದ್ವಜಾರೋಹಣವನ್ನು ಮಾಜಿ ಶಾಸಕ ಎ.ಪಾಪಾರೆಡ್ಡಿ ನೇರವೇರಿಸಲಿದ್ದಾರೆ. ಅತಿಥಿಗಳಾಗಿ ವರ್ತಕ ಗಧಾರ ಬೆಟ್ಟಪ್ಪ ಆಗಮಿಸಲಿದ್ದಾರೆ ಎಂದರು.

ಸಂಜೆ 5 ಗಂಟೆಗೆ ಮಹಿಳಾ ಸಮಾವೇಶ ನಡೆಯಲಿದ್ದು, ಅಧ್ಯಕ್ಷತೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಉತ್ತರಾದೇವಿ ವಹಿಸಿಕೊಳ್ಳಲಿದ್ದು, ಮಹಾನಗರ ಪಾಲಿಕೆ ಅಧ್ಯಕ್ಷೆ ನರಸಮ್ಮ ನರಸಿಂಹಲು ಮಾಡಗಿರಿ ನೇರವೆರಿಸಲಿದ್ದಾರೆ. ಜು.13 ರಂದು ಸಂಜೆ.6.30ಕ್ಕೆ ಶ್ರೀ ಗುರುಬಸವ ಪೂಜೆ ಮತ್ತು ಸಾಮೂಹಿಕ ಇಷ್ಟಲಿಂಗ ಪೂಜಾ ಕಾರ್ಯಕ್ರಮ ನಡೆಯಲಿದೆ. ಬೆಳಗ್ಗೆ 9 ಗಂಟೆಗೆ ಪಥ ಸಂಚಲನ ನಡೆಯಲಿದೆ. ಬೆಳಿಗ್ಗೆ 11 ಗಂಟೆಗೆ ರಾಷ್ಟ್ರೀಯ ಬಸವದಳ ಅಧೀವೇಶನ ಮತ್ತು ಸಮಾರೋಪ ಸಮಾರಂಭ ನಡೆಯಲಿದೆ.


ಉದ್ಘಾಟನೆಯನ್ನು ಪೌರಾಡಳಿತ ಸಚಿವ ರಹೀಂ ಖಾನ್ ನೇರವೆರಿಸಲಿದ್ದಾರೆ. ವಿಶೇಷ ಉಪನ್ಯಾಸಕರಾಗಿ ವಿಶ್ವಾರಾಧ್ಯ ಸಂತ್ಯೇಪೆಟೆ, ವೀರಣ್ಣ ಕೊರ್ಲಳ್ಳಿ, ಜಿ.ಎಂ.ರಂಗಪ್ಪ ಆಗಮಿಸಲಿದ್ದಾರೆ ಎಂದರು. ಈ ಸಂದರ್ಭದಲ್ಲಿ ಮರಿಬಸ್ಸಪ್ಪ ಗೌಡ, ಸೂಗರೆಡ್ಡಿ, ಕೆ.ನರಸಪ್ಪ, ನಾಗರಾಜ ಪಾಟೀಲ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net