ಸೆ. 1ರಂದು ದಿ. ಭೀಮಶಿ ಕಲಾದಗಿ ನುಡಿ ನಮನ

Sec. On the 1st. Salute to Bhimashi Kaladagi
Published on

ವಿಜಯಪುರ : ಇಂಡಿ ರಸ್ತೆಯ ಎಪಿಎಂಸಿ ಯಾರ್ಡ್​ನಲ್ಲಿರುವ ಶ್ರೀ ನೀಲಕಂಠೇಶ್ವರ ಮಂಗಲ ಕಾರ್ಯಾಲಯದಲ್ಲಿ ಸೆ. 1 ರಂದು ಬೆಳಗ್ಗೆ 11 ಕ್ಕೆ ದಿವಂಗತ ಕಾಂ. ಭೀಮಶಿ ಕಲಾದಗಿ ಅವರ ಕುರಿತ ನುಡಿ ನಮನ ಕಾರ್ಯಕ್ರಮ ನಡೆಯಲಿದೆ.

ಭಾರತ ಕಮ್ಯುನಿಸ್ಟ್​ ಪಕ್ಷ (ಮಾರ್ಕ್ಸ್​ ವಾದಿ) ಜಿಲ್ಲಾ ಸಮಿತಿ ವತಿಯಿಂದ ಕಾರ್ಯಕ್ರಮ ಆಯೋಜಿಸಲಾಗಿದೆ. ಮುಖ್ಯ ಅತಿಥಿಗಳಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ, ಸಕ್ಕರೆ ಸಚಿವ ಶಿವಾನಂದ ಪಾಟೀಲ, ಸಿಪಿಐ (ಎಂ) ರಾಜ್ಯ ಕಾರ್ಯದರ್ಶಿ ಕಾಂ. ಯು. ಬಸವರಾಜ, ಸಿಐಟಿಯು ರಾಜ್ಯಾಧ್ಯಕ್ಷೆ ಎಸ್​. ವರಲಕ್ಷಿ$್ಮ, ಅಖಿಲ ಭಾರತ ಜನವಾದಿ ಮಹಿಳಾ ಸಂದ ರಾಜ್ಯ ಉಪಾಧ್ಯಕ್ಷ ಕಾಂ. ಕೆ. ನೀಲಾ, ರಾಜ್ಯ ಗ್ರಾಪಂ ನೌಕರರ ಸಂದ ರಾಜ್ಯಾಧ್ಯಕ್ಷ ಕಾಂ, ಎಂ.ಬಿ. ನಾಡಗೌಡ, ರಾಜ್ಯ ಪ್ರಾಂತ ರೈತ ಸಂದ ರಾಜ್ಯ ಉಪಾಧ್ಯಕ್ಷ ಕಾಂ. ಬಿ.ಎಸ್​. ಸೊಪ್ಪಿನ, ಕಾಂ. ಜಿ. ನಾಗರಾಜ, ಕಾಂ. ಟಿ. ಯಶವಂತ ಸೇರಿ ಮತ್ತಿತರರ ರೈತ&ಕಾರ್ಮಿಕರು ಮುಂತಾದವರು ಆಗಮಿಸುವರೆಂದು ಅಣ್ಣರಾಯ ಈಳಗೆರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net