ಸೆ. 1ಕ್ಕೆ ದುರ್ಗಾಹೋಮ ಪೂಜೆ

CTD 26 Jala Male Durgamma
Published on

ಚಿತ್ರದುರ್ಗ: ಕೋಟೆಯ ಬಂದಿಖಾನೆ ಸಮೀಪದ ಜಲಮಾಲೇ ದುರ್ಗಮ್ಮ ದೇವಿಯ ಗಂಗಾಪೂಜೆ, ದುರ್ಗಾಹೋಮವನ್ನು ಸೆ. 1ರಂದು ಆರೋಗ್ಯವೇ ಭಾಗ್ಯ ಯುವಕರ ಸಂಘದಿಂದ ಹಮ್ಮಿಕೊಳ್ಳಲಾಗಿದೆ.

ಅಂದು ಬೆಳಗ್ಗೆ 6.30ಕ್ಕೆ ಮಲೆನಾಡು ಚೌಡೇಶ್ವರಿ ದೇವಿಯ ನೇತೃತ್ವದಲ್ಲಿ ಸಿಹಿನೀರು ಹೊಂಡದಲ್ಲಿ ಗಂಗಾಪೂಜೆ, ನಂತರ ಮೆರವಣಿಗೆ ಮೂಲಕ ದೇಗುಲಕ್ಕೆ ಕರೆತರಲಾಗುವುದು.

9.30ಕ್ಕೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಸೇವೆ, ದುರ್ಗಾಹೋಮ, ಮಧ್ಯಾಹ್ನ 12.30ಕ್ಕೆ ಪೂರ್ಣಾಹುತಿ ಮಹಾಮಂಗಳಾರತಿ, ಭಕ್ತರಿಗೆ ಅನ್ನಸಂತರ್ಪಣೆ ಆಯೋಜಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಸಂಘ ಮನವಿ ಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net