

ಗುಂಡ್ಲುಪೇಟೆ : ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿ ಪರ್ಮಿಟ್ ಹಾಗೂ ಸಮರ್ಪಕ ದಾಖಲೆ ಇಲ್ಲದೆ ಕಲ್ಲು ಸಾಗಣೆ ಮಾಡುತ್ತಿದ್ದ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.ಗಣಿ ಮತ್ತು ಭೂವಿಜ್ಞಾನ ಇಲಾಖೆಯ ವಿಜ್ಞಾನಿ ಜನಾರ್ಧನ ಗುರುವಾರ ಸಂಜೆ ದಿಢೀರ್ ದಾಳಿಯಲ್ಲಿ ತಾಲೂಕಿನ ತೆರಕಣಾಂಬಿ ಸುತ್ತಮುತ್ತಲಿನ ಗಣಿಗಳಿಂದ ಅಧಿಕ ಪ್ರಮಾಣದಲ್ಲಿ ಬಿಳಿಕಲ್ಲು ಸಾಗಣೆ ಮಾಡುತ್ತಿದ್ದ ಒಂದು ಟಿಪ್ಪರ್ ಹಾಗೂ ಎರಡು ಟ್ರ್ಯಾಕ್ಟರ್‌ಗಳನ್ನು ತಪಾಸಣೆ ಮಾಡಿದಾಗ ಪರವಾನಗಿ ಇಲ್ಲದಿರುವುದು ಪತ್ತೆಯಾಯಿತು. ವಾಹನಗಳನ್ನು ತೆರಕಣಾಂಬಿ ಪೊಲೀಸರ ವಶಕ್ಕೆ ನೀಡಿ ಪ್ರಕರಣ ದಾಖಲಿಸಿದ್ದಾರೆ.