ಮೀನುಗಾರರಿಗೆ ಮುಂದುವರಿದ ಶೋಧ

Ship
Published on

ಮಂಗಳೂರು: ಸುರತ್ಕಲ್ ಲೈಟ್‌ಹೌಸ್‌ನಿಂದ ಸುಮಾರು 78 ಕಿ.ಮೀ. ದೂರದ ಅರಬಿ ಸಮುದ್ರದಲ್ಲಿ ಸೋಮವಾರ ತಡರಾತ್ರಿ ಸಂಭವಿಸಿದ ಬೋಟ್ ಅವಘಡದ ಸಂದರ್ಭ ನಾಪತ್ತೆಯಾಗಿರುವ ಒಂಬತ್ತು ಮೀನುಗಾರರು ಗುರುವಾರ ಸಾಯಂಕಾಲ ತನಕ ಪತ್ತೆಯಾಗಿಲ್ಲ. ಕೋಸ್ಟ್ ಗಾರ್ಡ್ ಮತ್ತು ಕರಾವಳಿ ಕಾವಲು ಪೊಲೀಸ್ ಪಡೆಯು ಹೆಲಿಕಾಫ್ಟರ್ ಮತ್ತು ಮುಳುಗು ತಜ್ಞರ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸುತ್ತಿದೆ.

ಮೃತದೇಹ ರವಾನೆ: ದುರಂತದಲ್ಲಿ ಮೃತಪಟ್ಟ ತಮಿಳುನಾಡಿನ ಅಲೆಗ್ಸಾಂಡರ್ ಮತ್ತು ದಾಸನ್ ಚನ್ನಪ್ಪ ಅವರ ಮೃತದೇಹಗಳನ್ನು ಬುಧವಾರ ಆಂಬುಲೆನ್ಸ್‌ನಲ್ಲಿ ಸಾಗಿಸಲಾಗಿದೆ. ಪಶ್ಚಿಮ ಬಂಗಾಳದ ಮಾಣಿಕ್‌ದಾಸ್‌ರ ಮೃತದೇಹವನ್ನು ಗುರುವಾರ ಸಾಯಂಕಾಲ ಬೆಂಗಳೂರು ಮಾರ್ಗದ ವಿಮಾನ ಮೂಲಕ ಪಶ್ಚಿಮ ಬಂಗಾಳಕ್ಕೆ ಕಳುಹಿಸಲಾಯಿತು.

ಪಾರಾಗಿ ಬಂದ ಪಶ್ಚಿಮ ಬಂಗಾಳ ಮೂಲದ ಸುನೀಲ್ ದಾಸ್ ಮತ್ತು ತಮಿಳುನಾಡಿನ ವೇಲುಮುರುಗನ್ ರಾಮಲಿಂಗನ್ ತವರೂರು ಸೇರಿದ್ದಾರೆ.

ಏ.11ರಂದು ಬೆಳಗ್ಗೆ 10ಕ್ಕೆ ಕೇರಳದ ಬೇಪೂರ್‌ನಿಂದ ಹೊರಟ ರಭಾ ಹೆಸರಿನ ಮೀನುಗಾರಿಕಾ ಬೋಟ್ 12ರ ತಡರಾತ್ರಿ ಮುಳುಗಡೆಯಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net