

ಹಳಿಯಾಳ: ತಾಲೂಕಿನ ಖಾಮಡೊಳ್ಳಿ ಗ್ರಾಮ ಬಳಿಯ ಕುಂಬಾರಕೊಪ್ಪ ಕೆರೆಯಲ್ಲಿ ವ್ಯಕ್ತಿಯೊಬ್ಬರು ಮುಳುಗಿರುವ ಘಟನೆ ಭಾನುವಾರ ನಡೆದಿದೆ. ಖಾಮಡೊಳ್ಳಿ ಗ್ರಾಮಸ್ಥರು ಈ ಕೆರೆಯಲ್ಲಿ ಇದೇ ಗ್ರಾಮದ 55 ವರ್ಷದ ಧಾಖುಣಿ ಕೆಸರೋಲಕರ್ ಎಂಬಾತ ಬಿದ್ದಿದ್ದಾನೆ ಎಂದು ಮಾಹಿತಿ ನೀಡಿದ್ದರು. ಆ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು ಗ್ರಾಮಸ್ಥರು ಹಾಗೂ ಅಗ್ನಿಶಾಮಕ ದಳದ ಸಹಾಯದೊಂದಿಗೆ ಶೋಧ ಕಾರ್ಯ ನಡೆಸಿದರು. ಆದರೆ, ವ್ಯಕ್ತಿ ಪತ್ತೆಯಾಗಿಲ್ಲ. ಮಾತ್ರವಲ್ಲದೆ, ಸಾಯಂಕಾಲ ಆಗಿದ್ದರಿಂದ ಕಾರ್ಯಾಚರಣೆಗೆ ಸಮಸ್ಯೆಯಾಗುತ್ತಿದೆ. ಹೀಗಾಗಿ ಸೋಮವಾರ ಮತ್ತೆ ಶೋಧ ಕಾರ್ಯಾಚರಣೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆನ್ನಲಾಗಿದೆ.