ಕಿರುರಂಗಮಂದಿರದಲ್ಲಿ ಜ.19 ರಂದು ಕರಿಯ ದೇವರ ಹುಡುಕಿ

kariya devara huduki
Published on

ಮೈಸೂರು: ರಂಗಬಂಡಿ ಮಳವಳ್ಳಿ ತಂಡವು ಜ.19 ರಂದು ಸಂಜೆ 7 ಗಂಟೆಗೆ ಕಿರುರಂಗಮಂದಿರದಲ್ಲಿ ‘ಕರಿಯ ದೇವರ ಹುಡುಕಿ’ ನಾಟಕ ಪ್ರದರ್ಶನ ಆಯೋಜಿಸಿದೆ. ನಿರಂಜನ ಖಾಲಿಕೊಡ ಅವರು ನಿರ್ದೇಶಿಸಿದ್ದಾರೆ. ಇದೊಂದು ಅನ್ವೇಷಣೆಯ ಕಥೆ. ತಮ್ಮ ದೇವರಾದ ‘ಕರಿಯ ದೇವರ’ನ್ನು ಹುಡುಕಿಕೊಂಡು, ದಾರಿಯರಿಯದ ಮಾರ್ಗದರ್ಶಿಯ ನಂಬಿಕೊಂಡು ಹೊರಡುವ ಐವರು ಸಹೋದರರ ಕಥೆಯಿದು.


ಈ ಅನ್ವೇಷಣೆಯಲ್ಲಿ ಸಹೋದರರು ದಾರಿತಪ್ಪಿ ತಮ್ಮ ಹೆಂಡತಿಯನ್ನು ಕಳೆದುಕೊಳ್ಳುತ್ತಾರೆ. ಧರ್ಮಾಂಧರಾಗಿ ಎಲ್ಲವನ್ನೂ ಕಳೆದುಕೊಳ್ಳುತ್ತಾರೆ. ಇಂತಹ ಒಂದು ಕಥೆಯ ಎಳೆಯಲ್ಲಿ ನಾಟಕಕಾರರು, ಪ್ರಕೃತಿ, ಲಿಂಗ ಅಸಮಾನತೆ, ಮತೀಯವಾದ, ಮೂಢನಂಬಿಕೆ ಸೇರಿದಂತೆ ಹಲವಾರು ವಿಚಾರಗಳ ಬಗ್ಗೆ ಬೆಳಕು ಚೆಲ್ಲುತ್ತಾರೆ. ಯಾವುದೋ ಒಂದು ಸಿದ್ಧಾಂತ ಅಥವಾ ಧರ್ಮದ ಬಗೆಗೆ ತೀವ್ರವಾಗಿ ಹಚ್ಚಿಕೊಂಡು ಮತಾಂಧರಾದವರ ದುರಂತದ ಕಥೆಯೇ ಈ ನಾಟಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net