ಹಲವು ರಸ್ತೆ, ಬಡಾವಣೆಗಳ ಸೀಲ್‌ಡೌನ್

28arsph1ep
Published on

ಅರಸೀಕೆರೆ: ಪಟ್ಟಣದಲ್ಲಿ ಕರೊನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟ ಹಿನ್ನೆಲೆಯಲ್ಲಿ ಶಾನುಭೋಗರ ಬೀದಿ ಸೇರಿ ಕೆಲ ರಸ್ತೆಗಳು ಹಾಗೂ ಬಡಾವಣೆಗಳನ್ನು ಮುಂಜಾಗ್ರತಾ ಕ್ರಮವಾಗಿ ಸೀಲ್‌ಡೌನ್ ಮಾಡಲಾಗಿದ್ದು, ಸಾರ್ವಜನಿಕರು ಹಾಗೂ ವಾಹನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ತಾಲೂಕು ಆಡಳಿತ ಔಷಧ ಸಿಂಪಡಣೆ ಜತೆಗೆ ನಾಗರಿಕರಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ಸೌಲಭ್ಯ ಕಲ್ಪಿಸಿದೆ.

ಕರೊನಾ ಸೋಂಕು ಹರಡುವಿಕೆ ತಡಗಟ್ಟುವ ಉದ್ದೇಶದಿಂದ ಸಂತೆ ಮೈದಾನ, ಸುನ್ನಿಚೌಕ, ಶಾನುಭೋಗರ ಬೀದಿಯಲ್ಲಿ ಹಲವು ಬಿಗಿ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.

ಸಾರ್ವಜನಿಕರು ಅನಗತ್ಯವಾಗಿ ಮನೆಯಿಂದ ಹೊರಬರಬಾರದು. ಜ್ವರ, ಶೀತ, ಕೆಮ್ಮು ಲಕ್ಷಣ ಕಂಡುಬಂದಲ್ಲಿ ತಕ್ಷಣವೇ ಆಸ್ಪತ್ರೆಗೆ ತೆರಳಿ ಸೂಕ್ತ ಚಿಕಿತ್ಸೆ ಪಡೆಯಬೇಕು ಎಂದು ತಹಸೀಲ್ದಾರ್ ಎಂ.ಜಿ.ಸಂತೋಷ್‌ಕುಮಾರ್ ತಿಳಿಸಿದ್ದಾರೆ.

ಸ್ಥಳಾಂತರ: ಕರೊನಾ ಸೋಂಕು ಕಾಣಿಸಿಕೊಂಡ ಕಾರಣ ಸಂತೆ ಮೈದಾನವನ್ನು ಸಂಪೂರ್ಣ ಲಾಕ್‌ಡೌನ್ ಮಾಡಲಾಗಿದ್ದು ತರಕಾರಿ ಹರಾಜು ಪ್ರಕ್ರಿಯೆಯನ್ನು ಎಪಿಎಂಸಿ ಪ್ರಾಂಗಣಕ್ಕೆ ಸ್ಥಳಾಂತರ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net