ಮಲ್ಪೆ ಕಡಲತೀರದಲ್ಲಿ ಸಮುದ್ರಪೂಜೆ

udp-19-malpe 1
Published on

ಉಡುಪಿ:  ಮಲ್ಪೆ ವಡಭಾಂಡೇಶ್ವ ಕಡಲತೀರದಲ್ಲಿ ಮೀನುಗಾರ ಸಂದ ನೇತೃತ್ವದಲ್ಲಿ ಪ್ರತಿ ವರ್ಷದಂತೆ ಮೀನುಗಾರಿಕಾ ಋತು ಪ್ರಾರಂಭದಲ್ಲಿ ಕಾಯಕದಲ್ಲಿ ರಕ್ಷಣೆ ಮತ್ತು ಸಮೃದ್ಧಿಗಾಗಿ ಸಮುದ್ರ ರಾಜನನ್ನು ಪ್ರಾರ್ಥಿಸಿ  ಸೋಮವಾರ ವಿಶೇಷ ಪೂಜೆ ನಡೆಯಿತು.

ವಡಭಾಂಡ ಬಲರಾಮ ದೇವಸ್ಥಾನ ಪ್ರಧಾನ ತಂತ್ರಿ ಸುಬ್ರಹ್ಮಣ್ಯ ತಂತ್ರಿ ಮತ್ತು ದೇಗುಲ ಅನುವಂಶಿಕ ಮೊಕ್ತೇಸರ ಶ್ರೀನಿವಾಸ್ ಭಟ್ ನೇತೃತ್ವದಲ್ಲಿ ಬೆಳಗ್ಗೆ ವಡಭಾಂಡ ಬಲರಾಮ ಹಾಗೂ ಬೊಬ್ಬರ್ಯ ದೇವರಿಗೆ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಬಳಿಕ ಮೀನುಗಾರರು ಶೋಭಾಯಾತ್ರೆಯಲ್ಲಿ ತೆರಳಿ ವಡಭಾಂಡೇಶ್ವರ ಸಮುದ್ರತಿರದಲ್ಲಿ ಪೂಜೆ ಸಲ್ಲಿಸಿ, ಸಮುದ್ರ ರಾಜ ಹಾಗೂ ಗಂಗಾಮಾತೆಗೆ ಕ್ಷೀರ, ಲಪುಷ್ಟ, ಸೀಯಾಳವನನ್ನು ಅರ್ಪಿಸಿದರು. ಯಾವುದೇ ಪ್ರಾಕೃತಿಕ ವಿಕೋಪ ಬಾರದೆ ಹೇರಳ ಮತ್ಸ್ಯ ಸಂಪತ್ತು ಲಭಿಸುವಂತಾಗಲಿ ಎಂದು ಪ್ರಾರ್ಥಿಸಿದರು.

ಮೀನುಗಾರ ಸಂದ ಅಧ್ಯ ದಯಾನಂದ ಸುವರ್ಣ, ಶಾಸಕ ಯಶಪಾಲ್ ಸುವರ್ಣ, ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ದ.ಕ. ಮೊಗವೀರ ಮಹಾಜನ ಸಂದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಹರಿಯಪ್ಪ ಕೋಟ್ಯಾನ್,ಮೀನುಗಾರ ಸಂದ ಕಾರ್ಯದರ್ಶಿ ಜಗನ್ನಾಥ ಕಡೆಕಾರು, ಕೋಶಾಧಿಕಾರಿ ಪ್ರಕಾಶ್ ಬಂಗೇರ, ಸಂದ ಮಾಜಿ ಅಧ್ಯಕ್ಷರಾದ ಕೃಷ್ಣ ಎಸ್. ಸುವರ್ಣ, ಹಿರಿಯಣ್ಣ ಟಿ. ಕಿದಿಯೂರು, ಸತೀಶ್ ಕುಂದರ್, ಶಿವಪ್ಪ ಟಿ. ಕಾಂಚನ್, ಕೇಶವ ಎಂ. ಕೋಟ್ಯಾನ್, ಸುಭಾಸ್ ಮೆಂಡನ್, ಸಾಧು ಸಾಲ್ಯಾನ್, ರವಿರಾಜ್ ಸುವರ್ಣ, ನಾಗರಾಜ್ ಬಿ. ಕುಂದರ್ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net