ಸಮುದ್ರರಾಜನಿಗೆ ಕಡಲಮಕ್ಕಳ ಪೂಜೆ: ಕಾಯಕದ ವೇಳೆ ರಕ್ಷಣೆ, ಸಮೃದ್ಧಿಗಾಗಿ ಪ್ರಾರ್ಥನೆ

UDP-12-SAMUDRA PUJE
Published on

ಉಡುಪಿ: ಮಲ್ಪೆ ಕಡಲತೀರದಲ್ಲಿ ಮೀನುಗಾರ ಸಂಘದ ನೇತೃತ್ವದಲ್ಲಿ ಕಡಲ ಮಕ್ಕಳು ಪ್ರತೀ ವರ್ಷದಂತೆ ಮೀನುಗಾರಿಕಾ ಋತು ಪ್ರಾರಂಭದಲ್ಲಿ ತಮ್ಮ ಕಾಯಕದಲ್ಲಿ ರಕ್ಷಣೆ ಮತ್ತು ಸಮೃದ್ಧಿಗಾಗಿ ಸಮುದ್ರ ರಾಜನನ್ನು ಪ್ರಾರ್ಥಿಸಿ ಶುಕ್ರವಾರ ವಿಶೇಷ ಪೂಜೆ ಸಲ್ಲಿಸಿದರು.

ಬೆಳಗ್ಗೆ ವಡಭಾಂಡ ಬಲರಾಮ ದೇವಸ್ಥಾನ ಹಾಗೂ ಬೊಬ್ಬರ್ಯ ದೇವರಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಮೀನುಗಾರರು ಶೋಭಾಯಾತ್ರೆ ಮೂಲಕ ವಡಭಾಂಡೇಶ್ವರ ಸಮುದ್ರ ತೀರಕ್ಕೆ ತೆರಳಿ ಸಮುದ್ರ ರಾಜ ಹಾಗೂ ಗಂಗಾಮಾತೆಗೆ ಕ್ಷೀರ, ಲಪುಷ್ಪ, ಸೀಯಾಳವನ್ನು ಅರ್ಪಿಸಿದರು. ಬಾಲಕೃಷ್ಣ ತಂತ್ರಿ ಹಾಗೂ ಶ್ರೀನಿವಾಸ್ ಭಟ್ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.

ಉಚ್ಚಿಲ ಮೊಗವೀರ ಮಹಾಜನ ಸಂಘದ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಮೀನು ಮಾರಾಟ ೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಉದ್ಯಮಿ ಪ್ರಸಾದ್‌ರಾಜ್ ಕಾಂಚನ್, ಮೀನುಗಾರ ಸಂಘದ ಅಧ್ಯಕ್ಷ ದಯಾನಂದ ಕೆ. ಸುವರ್ಣ, ಉಪಾಧ್ಯಕ್ಷರಾದ ನಾಗರಾಜ್ ಬಿ. ಕುಂದರ್, ರಮೇಶ್ ಕೋಟ್ಯಾನ್, ನಾಗರಾಜ್ ಸುವರ್ಣ, ರವಿ ಸಾಲ್ಯಾನ್, ರಾಘವ ಜಿ. ಕೆ., ರಮೇಶ್ ಎಸ್. ಕುಂದರ್, ಕಾರ್ಯದರ್ಶಿ ರತ್ನಾಕರ್ ಸಾಲ್ಯಾನ್, ಜತೆ ಕಾರ್ಯದರ್ಶಿಗಳಾದ ಕಿಶೋರ್ ಕುಮಾರ್, ಧನಂಜಯ್ ಕಾಂಚನ್, ಕೋಶಾಧಿಕಾರಿ ಕರುಣಾಕರ್ ಸಾಲ್ಯಾನ್, ಮೀನುಗಾರ ಮುಖಂಡರಾದ ಹರಿಯಪ್ಪ ಕೋಟ್ಯಾನ್, ಸಾಧು ಸಾಲ್ಯಾನ್, ಗುಂಡು ಬಿ. ಅಮೀನ್, ಹಿರಿಯಣ್ಣ ಟಿ. ಕಿದಿಯೂರು ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net