ಪಡುಬಿದ್ರಿ ಬಳಿ ಕಡಲಾಮೆ ರಕ್ಷಣೆ

kadalame web
Published on

ಪಡುಬಿದ್ರಿ: ಪ್ರಕ್ಷುಬ್ದಗೊಂಡ ಸಮುದ್ರದ ಬೃಹತ್ ಅಲೆಗಳ ಹೊಡೆತಕ್ಕೆ ಸಿಲುಕಿ ನಿಶಕ್ತಿಗೊಂಡ ಭಾರಿ ಗಾತ್ರದ ಕಡಲಾಮೆಯೊಂದನ್ನು ಪಡುಬಿದ್ರಿ ಬ್ಲೂಫ್ಲ್ಯಾಗ್ ಬೀಚ್ ಸಿಬ್ಬಂದಿ ಗುರುವಾರ ರಕ್ಷಿಸಿ ಸಮುದ್ರಕ್ಕೆ ಬಿಟ್ಟರು. ಪಡುಬಿದ್ರಿ ಬೀಚ್ ಬಳಿ ಸಮುದ್ರ ತೀರದಲ್ಲಿ 25 ಕೆ.ಜಿ. ತೂಕದ ಕಡಲಾಮೆ ಬಳಲಿದ ಸ್ಥಿತಿಯಲ್ಲಿ ಇರುವುದನ್ನು ಕಂಡ ಬ್ಲೂಫ್ಲ್ಯಾಗ್ ಬೀಚ್ ಸಿಬ್ಬಂದಿ ಕೂಡಲೇ ಅದನ್ನು ಹಿಡಿದು ಆರೈಕೆ ಮಾಡಿ ಸುಸ್ಥಿತಿಯಲ್ಲಿ ಮರಳಿ ಸಮುದ್ರಕ್ಕೆ ಬಿಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net