ಆಮೆ ಮೊಟ್ಟೆ ರಕ್ಷಣಾ ಸ್ಥಳಕ್ಕೆ ಅರಣ್ಯ ಸಚಿವರ ಭೇಟಿ

rrrrrrrrrrrr
Published on


ಮಂಗಳೂರು : ಮಂಗಳೂರಿನ ತಣ್ಣೀರುಬಾವಿ ಕಡಲ ತೀರದಲ್ಲಿ ಅರಣ್ಯ ಇಲಾಖೆ ಸಂರಕ್ಷಣೆ ಮಾಡಿರುವ ಆಲೀವ್ ರೆಡ್ ಲೇ ಆಮೆಯ ಮೊಟ್ಟೆಗಳ ಸ್ಥಳವನ್ನು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಪರಿಶೀಲನೆ ಮಾಡಿದರು.
ಸೋಮವಾರ ತಡರಾತ್ರಿ ತಣ್ಣೀರು ಬಾವಿ ಅತಿಥಿ ಗೃಹಕ್ಕೆ ವಿಶ್ರಾಂತಿಗೆ ಆಗಮಿಸಿದಾಗ, ಅಧಿಕಾರಿಗಳು ತಣ್ಣೀರುಬಾವಿ ಬೀಚ್‌ನಲ್ಲಿ ಅಪರೂಪದ ಆಲೀವ್ ರೆಡ್ ಲೇ ಆಮೆ 1985ರ ಬಳಿಕ ಇದೇ ಮೊದಲ ಬಾರಿಗೆ ಸಾವಿರಾರು ಮೊಟ್ಟೆ ಇಟ್ಟಿರುವ ವಿಷಯ ತಿಳಿಸಿದರು. ತಕ್ಷಣ ಸ್ಥಳಕ್ಕೆ ಭೇಟಿ ನೀಡಿದ ಸಚಿವರು ಮೊಟ್ಟೆಗಳು ಮರಿಯಾದ ಬಳಿಕ ಸುರಕ್ಷಿತವಾಗಿ ಕಡಲಿಗೆ ಬಿಡುವಂತೆ ಸೂಚಿಸಿದರು.
ಈ ಅಪರೂಪದ ಆಮೆಗಳ ಮೊಟ್ಟೆ ನಾಯಿ ಮತ್ತು ಪಕ್ಷಿಗಳ ಪಾಲಾಗದಂತೆ ಸುತ್ತಲೂ ಕಟ್ಟೆ ಕಟ್ಟಿ ಸಂರಕ್ಷಿಸಿರುವ ಅರಣ್ಯ ಸಿಬ್ಬಂದಿಯ ಕಾಳಜಿ ಮತ್ತು ತಣ್ಣೀರು ಬಾವಿ ಕಡಲ ತೀರವನ್ನು ಅತ್ಯಂತ ಸ್ವಚ್ಛವಾಗಿಡುವ ನಿಟ್ಟಿನಲ್ಲಿ ಅವರ ಪರಿಶ್ರಮಕ್ಕೆ ಮೆಚ್ಚುಗೆ
ವ್ಯಕ್ತಪಡಿಸಿದರು. ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕರಿಕಾಳನ್, ಕೆಎಸ್‌ಡಿಸಿ ವ್ಯವಸ್ಥಾಪಕ ನಿರ್ದೇಶಕಿ ಕಮಲಾ ಕರಿಕಾಳನ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net