ಆಳ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ ಸಿರಿಯಾ ಹಡಗು; ಕೋಸ್ಟ್ ಗಾರ್ಡ್ ಸಿಬ್ಬಂದಿಯಿಂದ 15 ಜನರ ರಕ್ಷಣೆ

ದಗರತೆಯರೆತಯ
Published on

ಮಂಗಳೂರು: ಮಂಗಳೂರಿನಿಂದ 5.6 ನಾಟಿಕಲ್ ಮೈಲ್ ದೂರದ ಆಳಸಮುದ್ರದಲ್ಲಿ ಸಿರಿಯಾ ಮೂಲದ ಹಡಗೊಂದು ತಾಂತ್ರಿಕ ಸಮಸ್ಯೆಯಿಂದಾಗಿ ಅಪಾಯಕ್ಕೆ ಸಿಲುಕಿದ್ದು, ಅದರಲ್ಲಿದ್ದ 15 ಮಂದಿಯನ್ನು ಕೋಸ್ಟ್ ಗಾರ್ಡ್ ತಂಡ ರಕ್ಷಣೆ ಮಾಡಿದೆ.

ಸಿರಿಯಾ ದೇಶದ MV Princess miral ಹೆಸರಿನ ಹಡಗಿನ ಒಳ ಭಾಗಕ್ಕೆ ನೀರು ನುಗ್ಗಿದ ಪರಿಣಾಮ, ಅಪಾಯದಲ್ಲಿರುವ ರೇಡಿಯೋ ಸಂದೇಶ ಕೋಸ್ಟ್ ಗಾರ್ಡ್ ಪಡೆಗೆ ತಲುಪಿದೆ. ತಕ್ಷಣ ಕಾರ್ಯಾಚರಣೆ ಮಾಡಿ ಹಡಗಿನಲ್ಲಿದ್ದ 15 ಮಂದಿಯನ್ನ ರಕ್ಷಣೆ ಮಾಡಿದ್ದಾರೆ.

ಚೀನಾದಿಂದ ಸಿರಿಯಾ ದೇಶಕ್ಕೆ 8,000 ಟನ್ ಖನಿಜ ಹೊತ್ತು ಸಾಗಿಸುತ್ತಿದ್ದ ಹಡಗು, ಆಳ ಸಮುದ್ರದಲ್ಲಿ ಈ ಘಟನೆ ನಡೆದಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net