ಜ.26ರಂದು ‘ಡೆನ್ ಡೆನ್ ಸೀ ಸ್ವಿಮ್ಮಿಂಗ್ ಸ್ಪರ್ಧೆ

surf
Published on



ಮಂಗಳೂರು : ಮಂಗಳೂರು ಸರ್ ಕ್ಲಬ್ ವತಿಯಿಂದ ತಣ್ಣೀರುಬಾವಿಯ ಮಂಗಳೂರು ಸರ್ ಕ್ಲಬ್ ಬೀಚ್‌ನಲ್ಲಿ ಜ.26ರಂದು ಡೆನ್ ಡೆನ್ ಸೀ ಸ್ವಿಮ್ಮಿಂಗ್ ಸ್ಪರ್ಧೆ ನಡೆಯಲಿದೆ.
ಅಂದು ಬೆಳಗ್ಗೆ 6ರಿಂದ 9ರವರೆಗೆ ಸ್ಪರ್ಧೆ ನಡೆಯಲಿದೆ. ಮಕ್ಕಳು, ಮಹಿಳೆಯರು, ಪುರುಷರು ಸೇರಿದಂತೆ ವಯೋಮಾನಕ್ಕನುಗುಣವಾಗಿ ಒಟ್ಟು 6 ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ. ಸ್ಪರ್ಧಾ ವಿಜೇತರಿಗೆ ಪದಕ ಮತ್ತು ಪ್ರಮಾಣಪತ್ರ ನೀಡಿ ಗೌರವಿಸಲಾಗುವುದು 120ಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸುವ ನಿರೀಕ್ಷೆ ಇದೆ ಎಂದು ಮಂಗಳೂರು ಸರ್ ಕ್ಲಬ್‌ನ ಅಧ್ಯಕ್ಷ ಚಿರಾಗ್ ಶಂಭು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಮಂಗಳೂರು ಸರ್ ಕ್ಲಬ್ ಸದಸ್ಯರಾದ ಮಿಥುನ್ ಕಾಕುಂಜೆ ಮತ್ತು ಯಶ್ ಸಿನೋಜಿಯಾ ಉಪಸ್ಥಿತರಿದ್ದರು.
------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net