ಕಡಲ್ಕೊರೆತ ಶಾಶ್ವತ ತಡೆಗೆ ಮುತುವರ್ಜಿ...

Yashpal Lead
Published on

ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಭರವಸೆ

ಗುಜ್ಜರಬೆಟ್ಟುವಿನಲ್ಲಿ ಪ್ರತಿಬಂಧಕ ಕಾಮಗಾರಿಗೆ ಚಾಲನೆ

ವಿಜಯವಾಣಿ ಸುದ್ದಿಜಾಲ ಉಡುಪಿ

ಕಳೆದ ಮಳೆಗಾಲದ ಸಂದರ್ಭದಲ್ಲಿ ತೀವ್ರ ಕಡಲ್ಕೊರೆತ ಉಂಟಾಗಿದ್ದ ಗುಜ್ಜರಬೆಟ್ಟು ಭಾಗದ ಪ್ರದೇಶಗಳಿಗೆ ಮೀನುಗಾರಿಕಾ ಮತ್ತು ಬಂದರು ಇಲಾಖೆಯ ಮೂಲಕ 1 ಕೋಟಿ ರೂ. ಅನುದಾನ ಒದಗಿಸಲಾಗಿದ್ದು, ಪ್ರತಿಬಂಧಕ ಕಾಮಗಾರಿ ನಡೆಯಲಿದೆ. ಮುಂದಿನ ದಿನಗಳಲ್ಲಿ ಕಡಲ್ಕೊರೆತ ತಡೆಗೆ ಶಾಶ್ವತ ಪರಿಹಾರ ಒದಗಿಸಲು ವಿಶೇಷ ಮುತುವರ್ಜಿ ವಹಿಸಲಾಗುವುದು ಎಂದು ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಭರವಸೆ ನೀಡಿದರು.

Yashpal 2
ಉಡುಪಿಯ ಕೆಮ್ಮಣ್ಣು ಗ್ರಾಪಂ ವ್ಯಾಪ್ತಿಯ ಗುಜ್ಜರಬೆಟ್ಟು ಸಮೀಪದ ಲಕ್ಷ್ಮೀನಾರಾಯಣ ಭಜನಾ ಮಂದಿರ ಹಾಗೂ ಗುರು ರಾಘವೇಂದ್ರ ಭಜನಾ ಮಂದಿರದ ಬಳಿಯ ಕಡಲ್ಕೊರೆತ ಪ್ರದೇಶಗಳಿಗೆ ಮಂಜೂರಾದ 1 ಕೋಟಿ ರೂ. ವೆಚ್ಚದ ಕಡಲ್ಕೊರೆತ ಪ್ರತಿಬಂಧಕ ಕಾಮಗಾರಿಗೆ ಜೂನ್ 2ರಂದು ಚಾಲನೆ ನೀಡಿ ಮಾತನಾಡಿದರು.

ಕೆಮ್ಮಣ್ಣು ಗ್ರಾಪಂ ಅಧ್ಯೆ ಕುಸುಮಾ ರವೀಂದ್ರ, ಉಪಾಧ್ಯಕ್ಷ ಅರುಣ, ಲಕ್ಷ್ಮೀನಾರಾಯಣ ಭಜನಾ ಮಂದಿರದ ಅಧ್ಯಕ್ಷ ರತ್ನಾಕರ ಸಾಲ್ಯಾನ್​, ಗುರು ರಾಘವೇಂದ್ರ ಭಜನಾ ಮಂದಿರದ ಅಧ್ಯಕ್ಷ ಸುಂದರ ಗುಜ್ಜರಬೆಟ್ಟು, ಕೆಮ್ಮಣ್ಣು ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸತೀಶ ಶೆಟ್ಟಿ, ಗ್ರಾಪಂ ಸದಸ್ಯರಾದ ಪ್ರಶಾಂತ ಕೆಮ್ಮಣ್ಣು, ಪುರಂದರ ಕುಂದರ್​ ಗುಜ್ಜರಬೆಟ್ಟು, ಸಂಧ್ಯಾ ಕೆಮ್ಮಣ್ಣು, ಧೀರೇಂದ್ರ ನಾಯ್ಕ ಬೆಂಗ್ರೆ, ಲೋಕೇಶ ಸಾಲ್ಯಾನ್​, ಪ್ರತಿಭಾ ಭಾಸ್ಕರ, ವತ್ಸಲಾ, ಸ್ಥಳೀಯ ಮುಖಂಡರಾದ ಪ್ರಶಾಂತ ಕಾಂಚನ್​, ಮಾಲತಿ ಶ್ರೀಯಾನ್​, ಮುತ್ತಪ್ಪ ಮೇಸ್ತ್ರಿ, ರವೀಂದ್ರ ಶ್ರೀಯಾನ್​, ವಿಶುಕುಮಾರ್​ ಗುಜ್ಜರಬೆಟ್ಟು, ರವಿ ಸನಿಲ್​ ಹೂಡೆ, ದಿನೇಶ ಮೇಸ್ತ್ರಿ, ಗಂಗಾಧರ ಪಾಲನ್​, ಶೇಖರ ಶ್ರೀಯಾನ್​, ರಾಘು ಕುಂದರ್​, ಲತೇಶ ಗುಜ್ಜರಬೆಟ್ಟು, ಪುರುಷೋತ್ತಮ ಗುಜ್ಜರಬೆಟ್ಟು, ರವಿ ಕುಂದರ್​ ಗುಜ್ಜರಬೆಟ್ಟು ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net