ಎಸ್‌ಡಿಪಿಐ ಕಚೇರಿಯಲ್ಲಿ ಪೊಲೀಸರ ತಪಾಸಣೆ

IMG-20220916-WA0076677
Published on

ಚಿತ್ರದುರ್ಗ: ಪಿಎಫ್‌ಐ ನಿಷೇಧದ ಬೆನ್ನಲ್ಲೆ,ನಗರದ ಎಸ್‌ಡಿಪಿಐ ಕಚೇರಿ,ಪಿಎಫ್‌ಐ ಜಿಲ್ಲಾಧ್ಯಕ್ಷ ನಾಸಿರುದ್ದೀನ್ ಹಾಗೂ ಈಗಾಗಲೇ ನ್ಯಾಯಾಂಗ ಬಂಧನದಲ್ಲಿರುವ ಪಿಎಫ್‌ಐ ಸದಸ್ಯ ಆಫನ್ ಅಲಿ ನಿವಾಸಗಳಲ್ಲಿ ಗುರುವಾರ ಪೊಲೀಸರು ತಪಾಸಣೆ ನಡೆಸಿದ್ದಾರೆ ಎಂದು ಎಸ್ಪಿ ಕೆ.ಪರಶುರಾಮ್ ತಿಳಿಸಿದ್ದಾರೆ.

ಎಸ್‌ಡಿಪಿಐ ಕಚೇರಿಯಲ್ಲಿ ಪಿಎಫ್‌ಐಗೆ ಸೇರಿದ ಬ್ಯಾನರ್‌ನ್ನು ವಶಪಡಿಸಿಕೊಳ್ಳಲಾಗಿದೆ. ನಗರದ ಈದ್ಗಾ ಮೊಹಲ್ಲಾದಲ್ಲಿರುವ ನಾಸಿರು ದ್ದೀನ್ ಮನೆ ಹಾಗೂ ಅಲಿ ಮೊಹಲ್ಲಾದಲ್ಲಿ ಆಫನ್ ಅಲಿ ನಿವಾಸದಲ್ಲಿ ತಪಾಸಣೆ ನಡೆಸಲಾಯಿತು. ತಹಸೀಲ್ದಾರ್ ಸತ್ಯನಾರಾಯಣ,ಕೋಟೆ ಠಾಣೆ ಪಿಐ ರಮೇಶ್‌ರಾವ್,ನಗರ ಠಾಣೆ ಪಿಐ ತಿಪ್ಪೇಸ್ವಾಮಿ ಮತ್ತವರ ಸಿಬ್ಬಂದಿ ಕಾರ‌್ಯಾಚರಣೆ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net